ಭಾಗಮಂಡಲ, ಆ. 25: ಭಾಗಮಂಡಲ-ಕರಿಕೆ ಮುಖ್ಯ ರಸ್ತೆಯಲ್ಲಿರುವ ತಲಕಾವೇರಿ ವನ್ಯಜೀವಿ ವಲಯದ ಮೀಸಲು ಅರಣ್ಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅಚರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. 2-3 ದಿನಗಳ ಹಿಂದೆ ಸಾವನ್ನಪ್ಪಿರುವ ಶಂಕೆಯಿದ್ದು, ಅಂದಾಜು 55-60 ವರ್ಷ ಇರಬಹುದೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಪ್ಪು ಚುಕ್ಕಿ ಇರುವ ಲುಂಗಿ ಮತ್ತು ಗೆರೆಗಳಿರುವ ಅಂಗಿ ಧರಿಸಿದ್ದು, ವಾರಸುದಾರರಿದ್ದಲ್ಲಿ ದೂ. 08272-243270, 08272-220100ಕ್ಕೆ ಕರೆ ಮಾಡಿ ತಿಳಿಸುವಂತೆ ಭಾಗಮಂಡಲ ಠಾಣಾಧಿಕಾರಿ ಕೋರಿದ್ದಾರೆ.