ಕೂಡಿಗೆ, ಆ. 25: ಕೂಡಿಗೆ ಗ್ರಾಮ ವ್ಯಾಪ್ತಿಯ ಸೀಗೆಹೊಸೂರು ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಹುಣಸೆಪಾರೆ ಹಾಡಿಗೆ ಹೋಗುವ ರಸ್ತೆಯು ತೀರಾ ಮಳೆಯಿಂದಾಗಿ ಹಾಳಾಗಿ ಹಾಡಿಯ ಜನರು ಮತ್ತು ಈ ಭಾಗದ ಗ್ರಾಮಸ್ಥರು ತಿರುಗಾಡಲು ಸಾಧ್ಯವಾಗದಷ್ಟು ಕೆಸರುಮಯ ರಸ್ತೆಯಾಗಿತ್ತು. ಇದನ್ನು ತಿಳಿದ ಸೀಗೆಹೂಸೂರು ಗ್ರಾಮದ ಯುವಕರ ತಂಡದ 25ಕ್ಕೂ ಹೆಚ್ಚು ಮಂದಿ ಕಲ್ಲುಕೊರೆಯಿಂದ ಜಲ್ಲಿಕಲ್ಲು ಪುಡಿಯನ್ನು ತಂದು ಒಂದು ಕಿಲೋಮೀಟರ್ ದೂರದವರೆಗೆ ರಸ್ತೆಗೆ ಹಾಕಿ ಸಮತಟ್ಟುಪಡಿಸಿದ್ದಾರೆ. ಈ ಕೆಲಸದಲ್ಲಿ ಬೊಮ್ಮೇಗೌಡನ ಚಿಣ್ಣಪ್ಪ, ಕೋರೆ ಅಪ್ಪಿ, ಗುರುಪ್ರಸಾದ್, ಬಾಲಚಂದ್ರ, ಗಣಪತಿ, ಪೂವಯ್ಯ ಪ್ರಕಾಶ್, ಹರಿಹರನ್, ಮಿಥುನ್ ಸೇರಿದಂತೆ ಹಾಡಿ ಪ್ರಮುಖರು ಭಾಗವಹಿಸಿದ್ದರು.