ಗೋಣಿಕೊಪ್ಪಲು, ಆ. 25: ಪ್ರಸ್ತುತ ವರ್ಷ ಸುರಿದ ಮಳೆಯಿಂದಾಗಿ ಸಾವಿರಾರು ರೈತರ ಭತ್ತದ ಗದ್ದೆಗಳು, ಕಾಫಿ ತೋಟಗಳು ಹಾಳಾಗಿದ್ದು ಈ ಬಗ್ಗೆ ನೊಂದ ರೈತರಿಗೆ ಸರಕಾರ ಪರಿಹಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ನೂರಾರು ರೈತರು ಲಿಖಿತ ಅರ್ಜಿ ಸಲ್ಲಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಮುಂದಾಳತ್ವದಲ್ಲಿ ಪೆÇನ್ನಂಪೇಟೆ ಹೋಬಳಿಯ ರೈತರು ಒಟ್ಟಾಗಿ ಆಗಮಿಸಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿದರು.

ಪೆÇನ್ನಂಪೇಟೆ ಹೋಬಳಿಯ ಕಿರುಗೂರು,ಮತ್ತೂರು ಸೇರಿದಂತೆ ಇನ್ನಿತರ ಗ್ರಾಮಗಳಿಂದ ಆಗಮಿಸಿದ ರೈತರು ಪೆÇನ್ನಂಪೇಟೆ ನಾಡು ಕಚೇರಿಯ ಅಧಿಕಾರಿಗಳಾದ ರಾಧಾಕೃಷ್ಣ ಅವರಿಗೆ ಅರ್ಜಿಗಳನ್ನು ಹಸ್ತಾಂತರ ಮಾಡಿದರು.

ಈ ಸಂದರ್ಭ ಕೃಷಿ ಇಲಾಖೆಯ ವೀರಾಜಪೇಟೆ ತಾಲೂಕು ನಿರ್ದೇಶಕಿ ರೀನಾ, ತೋಟಗಾರಿಕಾ ಅಧಿಕಾರಿ ಲೀನಾ ಸೇರಿದಂತೆ ರೈತ ಮುಖಂಡರು ಹಾಜರಿದ್ದರು.