ಪೆÇನ್ನಂಪೇಟೆ, ಆ. 25: ಪೆÇನ್ನಂಪೇಟೆ ವಲಯ ಅರಣ್ಯ ವ್ಯಾಪ್ತಿಯಲ್ಲಿ ಕಾಡಿನಿಂದ ನಾಡಿಗೆ ನುಸುಳಿ ಕೃಷಿ ಫಸಲನ್ನು ನಾಶಮಾಡುತ್ತಿರುವ ಕಾಡಾನೆಗಳನ್ನು ಮರಳಿ ಕಾಡಿಗಟ್ಟುವ ಕಾರ್ಯಾಚರಣೆ ಯನ್ನು ನಡೆಸಲಾಗುತ್ತಿದ್ದು, ಇಂದು ಕಿರುಗೂರು ಕುಟ್ಟಿಚಾತ ದೇವರಕಾಡು, ಹಳ್ಳಿಗಟ್ಟು ಗುಂಡಿಯತ್ ಅಯ್ಯಪ್ಪ ದೇವರಕಾಡು, ಮತ್ತೂರು, ನಲ್ಲೂರು ಹೊಳೆಯ ಭಾಗಗಳಲ್ಲಿ ಕಾರ್ಯಾ ಚರಣೆ ನಡೆಸಲಾಯಿತು. ಆದರೆ ಈ ಭಾಗಗಳಲ್ಲಿ ಆನೆಗಳ ಇರುವಿಕೆ ಬಗ್ಗೆ ಕಾರ್ಯಾಚರಣೆ ತಂಡಕ್ಕೆ ಯಾವುದೇ ಸುಳಿವು ಕಂಡು ಬರಲಿಲ್ಲ. ಸಾರ್ವಜನಿಕರಿಂದಲೂ ಕೂಡ ಆನೆ ಇರುವಿಕೆ ಬಗ್ಗೆ ಖಚಿತ ಮಾಹಿತಿ ದೊರೆಯಲಿಲ್ಲ.

ಪೆÇನ್ನಂಪೇಟೆ ವಲಯ ಅರಣ್ಯಾಧಿಕಾರಿ ಅರಮಣಮಾಡ ತೀರ್ಥ ಅವರ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ದಿವಾಕರ್, ರವಿ ಕಿರಣ್, ಮಂಜುನಾಥ್ ಹಾಗೂ ಆರ್‍ಆರ್‍ಟಿ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ತಾ. 26ರಂದು (ಇಂದು) ಮುಗುಟಗೇರಿ ಹಾಗೂ ಬೇಗೂರು ಭಾಗಗಳಲ್ಲಿ ಕಾರ್ಯಾಚರಣೆ ನಡೆಯಲಿದೆ.

ತಮ್ಮ ಗ್ರಾಮಗಳಲ್ಲಿ ಕಾಡಾನೆಗಳು ಕಂಡುಬಂದಲ್ಲಿ ಸಾರ್ವಜನಿಕರು 9482636336 ಹಾಗೂ 7349090619 ಈ ಸಂಖ್ಯೆಗಳಿಗೆ ಕರೆ ಮಾಡಬಹುದಾಗಿದೆ ಎಂದು ಇಲಾಖಾಧಿಕಾರಿಗಳು ತಿಳಿಸಿದ್ದಾರೆ.

-ಚನ್ನನಾಯಕ