ಕೂಡಿಗೆ, ಆ.23: ಹಾರಂಗಿ ಅಚ್ಚುಕಟ್ಟು ಪ್ರದೇಶ ಮುಖ್ಯ ನಾಲೆಗೆ ಹೊಂದಿಕೊಂಡಿರುವ ನಾಲೆ ಉಪ ರಸ್ತೆಗಳ ದುರಸ್ತಿಗೆ ಆಯಾ ವ್ಯಾಪ್ತಿಯ ರೈತರುಗಳ ಆಗ್ರಹವಾಗಿದೆ.

ಹಾರಂಗಿ ಮುಖ್ಯ ನಾಲೆಗೆ ಹೊಂದಿಕೊಂಡಿರುವ ಮತ್ತು ರೈತರು ಅವರವರ ಜಮೀನಿಕ್ಕೆ ಬೇಸಾಯ ಮಾಡಲು ಹೋಗಲು ಅನುಕೂಲವಾಗುವಂತೆ ಅಚ್ಚುಕಟ್ಟು ಪ್ರದೇಶದ ನಕ್ಷೆಯನ್ನು ತಯಾರಿಸುವ ಸಂದರ್ಭದಲ್ಲಿ ಉಪ ರಸ್ತೆಯನ್ನು ತೋರಿಸಲಾಗಿದೆ. ಅದರಂತೆ ಅದೇ ಮಾರ್ಗದಲ್ಲಿ ಉಪ ಕಾಲುವೆಗಳ ನಿರ್ಮಾಣವಾಗಿ ನೂರಾರು ಎಕರೆ ಪ್ರದೇಶದಲ್ಲಿ ಬೇಸಾಯ ಮಾಡಲು ಅನುಕೂಲವಾಗಿದೆ. ಅದರೆ ಅಲ್ಲಿಗೆ ತೆರಳಲು ಸಮರ್ಪಕವಾದ ರಸ್ತೆ ಇಲ್ಲದಾಗಿ ಜಮೀನಿಗೆ ಹೋಗಲು ಸಾಧ್ಯವಾಗುತ್ತಿಲ್ಲ ಸಂಬಂಧಿಸಿದ ನೀರಾವರಿ ಇಲಾಖೆಯವರು ಒತ್ತುವರಿಯಾಗಿರುವ ನಾಲೆಯ ಉಪರಸ್ತೆಗಳ ಜಾಗವನ್ನು ತೆರವುಗೊಳಿಸಿ ರಸ್ತೆಯನ್ನು ದುರಸ್ತಿಪಡಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.