ಶನಿವಾರಸಂತೆ, ಆ. 23: ಶನಿವಾರಸಂತೆ ಸಮೀಪದ ಗುಡುಗಳಲೆಯ ಬಸವೇಶ್ವರ ಕಾಂಪ್ಲೆಕ್ಸ್ ದಿನಸಿ ಅಂಗಡಿಯ ಮಾಲೀಕ ಕೆ. ಸಂದೀಪ್ ಎಂಬವರ ಬೈಕನ್ನು (ಕೆ.ಎ. 12. ಎಲ್ 7203) ಅಂಗಡಿಯ ಮುಂಭಾಗದಿಂದ ಕಳವು ಮಾಡಿದ್ದ ಆರೋಪಿ ಜೀವನ್ ಎಂಬಾತನನ್ನು ಘಟನೆ ನಡೆದ 24 ಗಂಟೆಯೊಳಗಾಗಿ ಶನಿವಾರಸಂತೆ ಪೊಲೀಸರು ಬಂಧಿಸಿದ್ದಾರೆ.

ಜೀವನ್ ಈ ಹಿಂದೆಯೇ ಕಳವು ಪ್ರಕರಣವೊಂದರಲ್ಲಿ ಭಾಗವಹಿಸಿ ಜೈಲುಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದು, ಬಳಿಕ ಪುನಹ ಹಳೇ ಚಾಳಿಯನ್ನು ಮುಂದುವರೆಸಿದ್ದ. ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಹೆಚ್.ಇ. ದೇವರಾಜ್, ಅಪರಾದ ಪತ್ತೆದಳದ ಲೋಕೇಶ್, ಮುರಳಿ, ಸಿಬ್ಬಂದಿಗಳಾದ ಶಫೀರ್, ಬೋಪಣ್ಣ, ಶಶಿಕುಮಾರ್ ಪಾಲ್ಗೊಂಡಿದ್ದರು.