ಪೆರಾಜೆ, ಆ. 23: ಧಾರ್ಮಿಕ ಸಂಪ್ರದಾಯದ ಪ್ರಕಾರ ಗಣೇಶ ಚತುರ್ಥಿಯ ಹಬ್ಬದ ದಿನದಂದು ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಪಕ್ಕದ ಶ್ರೀ ಕಾವೇರಿ ಗದ್ದೆಯಿಂದ ತಲಕಾವೇರಿ ಕಾವೇರಿ ಸನ್ನಿಧಾನಕ್ಕೆ ಮತ್ತು ಪೆರಾಜೆಯ ಸೀಮೆ ದೇವಸ್ಥಾನವಾದ ಭಾಗಮಂಡಲದ ಭಗಂಡೇಶ್ವರ ಸನ್ನಿಧಿಗೆ ಕದಿರು ತೆಗೆದುಕೊಂಡು ಹೋಗುವ ಕಾರ್ಯಕ್ರಮ ನಡೆಯಿತು.

ಜಿಲ್ಲೆಯಾದ್ಯಂತ ಮಳೆ ಮತ್ತು ಭೂಕುಸಿತ, ಕೊರೊನಾ ವಿರುದ್ಧ ಸಾಮಾಜಿಕ ಅಂತರ ಇವೆಲ್ಲವನ್ನೂ ಎದುರಿಸಿರುವ ಜನರು ಸಂಕಷ್ಟದಲ್ಲಿ ರುವುದರಿಂದ ಕಾರ್ಯಕ್ರಮ ಸರಳವಾಗಿ ಹೋಮ-ಹವನ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ನಡೆಯಿತು.

ಈ ಸಂದರ್ಭದಲ್ಲಿ ಶ್ರೀ ಕಾವೇರಿ ಮತ್ತು ಭಾಗಮಂಡಲದ ಭಗಂಡೇಶ್ವರ ಮತ್ತು ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಆಡಳಿತ ಮೊಕ್ತೇಸರರು, ಆಡಳಿತ ಮಂಡಳಿಯ ಪದಾಧಿಕಾರಿ ಗಳು ಮತ್ತು ಸದಸ್ಯರು, ಅರ್ಚಕರು, ತಕ್ಕ ಮುಖ್ಯಸ್ಥರುಗಳು ಜೊತೆಗಿದ್ದರು. ಇದೇ ದಿನ ಪೆರಾಜೆ ಕ್ಷೇತ್ರದಲ್ಲಿ ಗಣಪತಿ ಹವನ ಮತ್ತು ಸೋಣ ಶನಿವಾರವನ್ನು ಆಚರಿಸಲಾಯಿತು.