ಪೊನ್ನಂಪೇಟೆ, ಆ. 24: ಪೊನ್ನಂಪೇಟೆ ನೂತನ ತಾಲೂಕು ರಚನೆ ಅಧಿಕೃತವಾಗಿ ಘೋಷಣೆ ಯಾಗಿದ್ದು, ರಾಜ್ಯಪಾಲರು ಅಧಿಕೃತವಾಗಿ ಅಂಕಿತ ಹಾಕಿದ್ದಾರೆ.

ಈ ಹಿನ್ನೆಲೆಯಲ್ಲಿ ವೇದಿಕೆಯ ಸದಸ್ಯರು ಹಾಗೂ ಸಾರ್ವಜನಿಕರು ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನ ದಲ್ಲಿ ಪೂಜೆ ಸಲ್ಲಿಸಿದರು. ನಂತರ ಮಹಾತ್ಮ ಗಾಂಧೀಜಿಯವರ ಪುತ್ಥಳಿ ಹಾಗೂ ಪೊನ್ನಂಪೇಟೆಯ ದಿವಾನ್ ಪೊನ್ನಪ್ಪ ಅವರ ಪ್ರತಿಮೆಗೆ ಮಾಲಾ ರ್ಪಣೆ ಮಾಡಿ ಸಿಹಿ ಹಂಚಿದರು.

ಈ ಸಂದರ್ಭ ನಡೆದ ಸರಳ ಸಮಾರಂಭದಲ್ಲಿ ಉಪಾಧ್ಯಕ್ಷ ಚೆಪ್ಪುಡಿರ ಸೋಮಯ್ಯ ಮಾತನಾಡಿ, ತಾಲೂಕು ಕಚೇರಿಗೆ ತಹಶೀಲ್ದಾರರ ನೇಮಕಾತಿ ಸೇರಿದಂತೆ ವಿವಿಧ ಕಾರ್ಯ ಚಟುವಟಿಕೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಮುಖಾಂತರ ಪತ್ರ ವ್ಯವಹಾರ ನಡೆಸಬೇಕೆಂದರು.

ವೇದಿಕೆಯ ಅಧ್ಯಕ್ಷ ಪೊಕ್ಕಳಿಚಂಡ ಪೂಣಚ್ಚ ಅವರು, ತಾಲೂಕು ರಚನೆಗಾಗಿ ನಡೆದ ಹೋರಾಟದಲ್ಲಿ ಸಹಕಾರ ನೀಡಿದವರನ್ನು ಸ್ಮರಿಸಿದರು. ವೇದಿಕೆಯ ಕಾನೂನು ಸಲಹೆಗಾರರಾದ ಮತ್ರಂಡ ಪಿ. ಅಪ್ಪಚ್ಚು ಮಾತನಾಡಿ, ತಾಲೂಕು ಉದ್ಘಾಟನೆಗೆ ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಕಂದಾಯ ಮಂತ್ರಿಯವರನ್ನು ಆಹ್ವಾನಿಸು ವಂತೆಯೂ, ನೂತನ ಮಿನಿ ವಿಧಾನ ಸೌಧ ಯೋಜನೆಯನ್ನು ಸಿದ್ಧಪಡಿಸಿ ಮುಖ್ಯಮಂತ್ರಿಗಳಿಂದ ವಿಶೇಷ ಅನುದಾನಕ್ಕೆ ಬೇಡಿಕೆ ಸಲ್ಲಿಸುವಂತೆ ಸಲಹೆಯಿತ್ತರು.

ಕಾರ್ಯಕ್ರಮದಲ್ಲಿ ವೇದಿಕೆಯ ಸದಸ್ಯರಾದ ಕಟ್ಟೇರ ಲಾಲಪ್ಪ, ಕಳ್ಳೇಂಗಡ ಗಣಪತಿ, ಚೆಪ್ಪುಡಿರ ಲಾಲ ಮುತ್ತಪ್ಪ, ಚೆಪ್ಪುಡಿರ ಪೊನ್ನಪ್ಪ ಸೇರಿದಂತೆ ಹಲವು ನಾಗರಿಕರು ಭಾಗವಹಿಸಿದ್ದರು. ವೇದಿಕೆಯ ಕಾರ್ಯ ದರ್ಶಿ ಸೆಲ್ವರಾಜು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.