ಮಡಿಕೇರಿ, ಆ. 24: ಮಾರ್ಚ್ ತಿಂಗಳಿನಿಂದ ಕೊರೊನಾ ಸೋಂಕು ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕಾರಣ ರಾಜ್ಯ ಸರಕಾರದಿಂದ ಹಲವಾರು ನಿರ್ಬಂಧಗಳನ್ನು ಹೇರಲಾಗಿತ್ತು. ಹೊರರಾಜ್ಯದಿಂದ ಕರ್ನಾಟಕಕ್ಕೆ ಆಗಮಿಸುತ್ತಿದ್ದ ಪ್ರಯಾಣಿಕರಿಗೆ ಹಲವಾರು ನಿರ್ಬಂಧಗಳನ್ನು ವಿಧಿಸಲಾಗಿತ್ತು. ಆದರೆ ಇತ್ತೀಚೆಗೆ ಅನ್‍ಲಾಕ್ - 3 ಮಾರ್ಗಸೂಚಿ ಅಡಿಯಲ್ಲಿ ಅಂತರ ರಾಜ್ಯ ಪ್ರಯಾಣದ ಹಲವು ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದ್ದು, ಇದಕ್ಕೆ ಸಂಬಂಧಪಟ್ಟಂತೆ ಅಂತರರಾಜ್ಯ ಪ್ರಯಾಣಕ್ಕೆ ಕೈಗೊಳ್ಳಲಾಗುತಿದ್ದ ಮುಂಜಾಗ್ರತಾ ಕ್ರಮಗಳಾದ ಸೇವಾ ಸಿಂದು ಪೋರ್ಟಲ್‍ನಲ್ಲಿ ಮಾಡುತ್ತಿದ್ದ ನೋಂದಣಿ, ರಾಜ್ಯದ ಗಡಿಗಳು,ಬಸ್,ವಿಮಾನ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ನಡೆಸುತ್ತಿದ್ದ ವೈದ್ಯಕೀಯ ತಪಾಸಣೆ, ಜಿಲ್ಲೆಯ ಪ್ರವೇಶ ಕೇಂದ್ರಗಳಲ್ಲಿ ನಡೆಸುತ್ತಿದ್ದ ತಪಾಸಣೆ, ಪ್ರಯಾಣಿಕರ ವರ್ಗೀಕರಣ,ಕೈಗಳ ಮೇಲೆ ಹಾಕುತ್ತಿದ್ದ ಮುದ್ರೆ, 14 ದಿನಗಳ ಕ್ವಾರೆಂಟೈನ್, ಬೇರ್ಪಡಿಸುವಿಕೆ ಹಾಗೂ ಪರೀಕ್ಷಿಸುವಿಕೆ, ಮನೆಯ ಬಾಗಿಲಿಗೆ ಪೋಸ್ಟರ್ ಹಾಕುವುದು, ನಿವಾಸಿಗಳ ಸಂಪರ್ಕ ತಡೆ, ಪರಿಶೀಲನಾ ತಂಡಗಳಿಂದ ನಡೆಸುತ್ತಿದ್ದ ಮೇಲ್ವಿಚಾರಣೆ, ಆ್ಯಪ್ ಮೂಲಕ ನಡೆಸುತ್ತಿದ್ದ ಮೇಲ್ವಿಚಾರಣೆ ಇವುಗಳನ್ನು ರದ್ದುಗೊಳಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಆದೇಶ ಹೊರಡಿಸಿದ್ದಾರೆ.