ಕೊಡಗು ಜಿಲ್ಲೆಯ ಹಲವೆಡೆಗಳಲ್ಲಿ ವಿವಿಧ ಸಂಘ-ಸಂಸ್ಥೆಗಳು, ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಗಳು ಆಚರಣೆಯಾಯಿತು. ನಾಡಿನೆಲ್ಲೆಡೆ ರಾಷ್ಟ್ರ ಪ್ರೇಮದ ಸಂದೇಶ ಪಸರಿಸಿತು.ಆಲೂರು-ಸಿದ್ದಾಪುರ ಸರ್ಕಾರಿ ಪ.ಪೂ. ಕಾಲೇಜು: ಆಲೂರು-ಸಿದ್ದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣವನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಭರತೇಶ್ ನೆರವೇರಿಸಿದರು. ಸಮಾರಂಭದಲ್ಲಿ ಕಾಲೇಜು ಪ್ರಾಂಶುಪಾಲ ಗಣಪತಿ ಭಟ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶೃತಿ ಮುಂತಾದವರಿದ್ದರು.

ಶನಿವಾರಸಂತೆ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಕಾಲೇಜಿನ ಕಾರ್ಯದರ್ಶಿ ಜಿ.ಎಂ. ಹೂವಯ್ಯ ನೆರವೇರಿಸಿದರು. ಸಮಾರಂಭದಲ್ಲಿ ಟ್ರಸ್ಟಿ ಹಾಗೂ ಪ್ರಾಂಶುಪಾಲ ಹೆಚ್.ಎನ್. ದೇವರಾಜು ಇತರರಿದ್ದರು.ಕಡಂಗ: ಬದ್ರಿಯಾ ಮಸೀದಿ ಮತ್ತು ಎಸ್‍ಎಸ್‍ಎಫ್ ಕಡಂಗ ಶಾಖಾ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಅಧ್ಯಕ್ಷ ಉಸ್ಮಾನ್ ಅಧ್ಯಕ್ಷತೆಯಲ್ಲಿ ಬದ್ರಿಯಾ ಸಂಸ್ಥೆಯ ವಠಾರದಲ್ಲಿ ನಡೆಸಲಾಯಿತು.

ಧ್ವಜಾರೋಹಣವನ್ನು ಬದ್ರಿಯಾ ಸಂಸ್ಥೆಯ ಅಧ್ಯಕ್ಷ ಸಿ.ಎಂ. ಸುಲೈಮಾನ್ ನಿರ್ವಹಿಸಿದರು. ಜಿಲ್ಲಾ ಎಸ್‍ಎಸ್‍ಎಫ್ ಸಹ ಕಾರ್ಯದರ್ಶಿ ನಿಸಾರ್ ಸಖಾಫಿ ಸ್ವಾತಂತ್ರ್ಯದ ಇತಿಹಾಸದ ಮೆಲುಕುಗಳನ್ನು ಸಂಕ್ಷಿಪ್ತವಾಗಿ ತಿಳಿಸಿದರು.

ಈ ಸಂದರ್ಭ ಸಂಸ್ಥೆಯ ಹಿರಿಯರಾದ ಅಬೂಬಕ್ಕರ್ ಅಬುದಾಬಿ, ಅಬ್ದುಲ್ ರಜಾಕ್, ರಾಸಿಖ್ ಪಾಲಿಬೆಟ್ಟ, ಎಂ.ಎ. ಗಫೂರ್, ಸಂಸ್ಥೆಯ ಕಾರ್ಯದರ್ಶಿ ಸಿ.ಎಂ. ಆಶಿಕ್, ಸಿ.ಎಂ. ನೌಶಾದ್, ಸಹೀದ್, ಅಜ್ಮಲ್ ಹಾಜರಿದ್ದರು. ಪತ್ರಕರ್ತ ನೌಫಲ್ ಮಾತನಾಡಿ, ಸ್ವಾತಂತ್ರೋತ್ಸವದ ಸಮಯದಲ್ಲಿ ದೇಶಕಾಯುವ ಯೋಧರನ್ನು ಮತ್ತು ಕೊರೊನಾ ವಾರಿಯರ್ಸ್‍ಗಳ ಕಾರ್ಯಗಳನ್ನು ನೆನಪಿಸಿಕೊಂಡರು.ಕೊಡ್ಲಿಪೇಟೆ ಕಲ್ಲುಮಠ ಶಾಲೆ: ಕೊಡ್ಲಿಪೇಟೆ ಕಲ್ಲುಮಠ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.

ಧ್ವಜರೋಹಣವನ್ನು ಕೊಡ್ಲಿಪೇಟೆಯ ಉದಯ್‍ಕುಮಾರ್ ಮಾಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಮಹಾಂತಸ್ವಾಮೀಜಿ, ಕಾರ್ಯದರ್ಶಿ ಹೆಚ್.ಎಂ. ದಿವಾಕರ್, ಕೊಡ್ಲಿಪೇಟೆ ವೀರಶೈವ ಸಮಾಜದ ಅಧ್ಯಕ್ಷ ಯತೀಶ್ ಮುಂತಾದವರಿದ್ದರು.

ಸಮೀಪದ ಹಂಡ್ಲಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಶಾಲಾಭಿವೃದ್ಧಿ ಸಮಿತಿ ಸದಸ್ಯ ಚಂದ್ರಶೇಖರ್ ನೆರವೇರಿಸಿದರು. ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಸದಸ್ಯ ರವಿ, ಸೀನ ಶಾಲಾ ಮುಖ್ಯ ಶಿಕ್ಷಕಿ ನಳಿನಿ ಮುಂತಾದವರಿದ್ದರು.

ಮಾಲಂಬಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಧ್ವಜಾರೋಹಣವನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ನೆರವೇರಿಸಿದರು. ಈ ಸಂದರ್ಭ ಸಮಿತಿಯ ಮಾಚಯ್ಯ, ಗುಂಡಪ್ಪ, ಮಧು, ವೇದಕುಮಾರಿ ಹಾಗೂ ಮುಖ್ಯ ಶಿಕ್ಷಕ ಗಿರೀಶ್ ಇತರರಿದ್ದರು.

ಕೊಡ್ಲಿಪೇಟೆ ವಿದ್ಯಾಸಂಸ್ಥೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಶಂಬುಲಿಂಗಪ್ಪ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಪರಮೇಶ್, ಡಾ. ಉದಯ್‍ಕುಮಾರ್, ಯತೀಶ್, ಕಾಲೇಜು ಪ್ರಾಂಶುಪಾಲ ನಿರಂಜನ್, ಮುಖ್ಯ ಶಿಕ್ಷಕ ಅಬ್ದುಲ್ ರಬ್, ಜಗದೀಶ್ ಬಾಬು ಮುಂತಾದವರಿದ್ದರು.

ಪೆÇನ್ನಂಪೇಟೆ: ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಪೆÇನ್ನಂಪೇಟೆ ಗಾಂಧಿ ಪ್ರತಿಮೆಯ ಬಳಿ ಪೆÇನ್ನಂಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೂಕಳೇರ ಸುನಿತ ಹಾಗೂ ಸದಸ್ಯರು ಧ್ವಜಾರೋಹಣವನ್ನು ನೆರವೇರಿಸಿದರು.

ಪೆÇನ್ನಂಪೇಟೆ ಮಾಜಿ ಸೈನಿಕರ ಸಂಘದ ವತಿಯಿಂದ ಸಂಘದ ಕಚೇರಿಯ ಅಧ್ಯಕ್ಷ ಐನಂಡ ಕೆ. ಮಂದಣ್ಣ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಬಯವಂಡ ರಮೇಶ್, ಚೋಡುಮಾಡ ರಾಜ, ಚಕ್ಕೆರ ರಮೇಶ್, ಪೆಮ್ಮಂಡ ಶ್ಯಾಮ್ ಪ್ರಸಾದ್, ಬಾಚಂಡ ಬೆಳ್ಯಪ್ಪ, ಮಾಚಂಗಡ ಮುತ್ತಣ್ಣ ಹಾಜರಿದ್ದರು.

ಪೆÇನ್ನಂಪೇಟೆ ಎಪಿಸಿಎಂಎಸ್ ಆವರಣದಲ್ಲಿ ಸಂಘದ ಅಧ್ಯಕ್ಷ ಮಂಜು ಗಣಪತಿ ಧ್ವಜಾರೋಹಣ ನೆರವೇರಿಸಿದರು. ದಿನದ ಅಂಗವಾಗಿ ನಡೆದ ಸಮಾರಂಭದಲ್ಲಿ ಉಪಾಧ್ಯಕ್ಷ ಪದಾರ್ಥಿ ಮಂಜುನಾಥ ಸೇರಿದಂತೆ ಸದಸ್ಯರು, ಸಿಬ್ಬಂದ ವರ್ಗ ಹಾಗೂ ಸಂಘದ ಪೆಟ್ರೋಲ್ ಬಂಕ್‍ನ ಸಿಬ್ಬಂದಿ ವರ್ಗದವರು ಹಾಜರಿದ್ದು, ಕಾರ್ಯಕ್ರಮವನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೂಕಳೇರ ಪೂನಂ ನೆರವೇರಿಸಿದರು.

ಕಂದಾಯ ಇಲಾಖೆಯ ವತಿಯಿಂದ ಸಂಘದ ಆವರಣದಲ್ಲಿ ಕಂದಾಯ ಅಧಿಕಾರಿ, ಉಪ ತಹಶೀಲ್ದಾರರು ಧ್ವಜಾರೋಹಣ ನೆರವೇರಿಸಿದರು. ಇಲಾಖೆಯ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ಚಿಕ್ಕಮುಂಡೂರು ಗ್ರಾಮದ ದವಸ ಭಂಡಾರದ ಆವರಣದಲ್ಲಿ ಐನಂಡ ಕಾರ್ಯಪ್ಪ ಅವರ ಜ್ಞಾಪಕಾರ್ಥವಾಗಿ ನಿರ್ಮಿಸಿದ ಧ್ವಜಸ್ಥಂಭದಲ್ಲಿ ದವಸ ಭಂಡಾರದ ಅಧ್ಯಕ್ಷ ಗಣೇಶ್ ಮಾದಪ್ಪ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭ ಗ್ರಾಮಸ್ಥರು ಸೇರಿದಂತೆ ನಿವೃತ್ತ ಅರಣ್ಯಾಧಿಕಾರಿ ಚಿಮ್ಮಣಮಾಡ ಸೋಮಯ್ಯ, ಮಾಜಿ ಸೈನ್ಯಾಧಿಕಾರಿ ಐನಂಡ ತಮ್ಮಯ್ಯ, ಮಾಜಿ ಸೈನಿಕ ಚಿಮ್ಮಣಮಾಡ ಬಾಬಿ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.