ಪೆÇನ್ನಂಪೇಟೆ, ಅ. 24: ರಾಜಕೀಯ ಮುತ್ಸದಿ ಎ.ಕೆ. ಸುಬ್ಬಯ್ಯ ಅವರು ನಿಧನರಾಗಿ ತಾ. 27ಕ್ಕೆ ಒಂದು ವರ್ಷ ಸಲ್ಲುವ ಹಿನ್ನೆಲೆಯಲ್ಲಿ ಅವರ ಮೊದಲ ವರ್ಷದ ಪುಣ್ಯಸ್ಮರಣೆ ಅಂಗವಾಗಿ ತಾ. 25 ರಂದು (ಇಂದು) ವೆಬಿನಾರ್ ಮೂಲಕ ‘ನುಡಿ ನಮನ’ ಸಲ್ಲಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ.

ತಾ. 25 ರಂದು (ಇಂದು) ಸಂಜೆ 5 ಗಂಟೆಯಿಂದ 7 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ.

ರಾಷ್ಟ್ರೀಯ ಖ್ಯಾತಿಯ ಮಾನವಹಕ್ಕು ಹೋರಾಟಗಾರ ತೀಸ್ತಾ ಸೆಟಲ್ವಾಡ್, ವಿಧಾನಸಭೆ ಮಾಜಿ ಅಧ್ಯಕ್ಷರು ಮತ್ತು ಶಾಸಕ ಕೆ.ಆರ್. ರಮೇಶ್ ಕುಮಾರ್, ರಾಜ್ಯ ಸರಕಾರದ ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್. ಪೆÇನ್ನಣ್ಣ, ಮಾಜಿ ಸಚಿವರು ಮತ್ತು ಮಂಗಳೂರು ಶಾಸಕ ಯು.ಟಿ. ಖಾದರ್, ಸಂಸ್ಕøತಿ ಚಿಂತಕ ರಹಮತ್ ತರಿಕೆರೆ, ಜನಪದ ಹೋರಾಟಗಾರ ನೂರ್ ಶ್ರೀಧರ್ ಮೊದಲಾದವರು ರಾಜ್ಯದ ವಿವಿಧ ಭಾಗಗಳಿಂದ ಭಾಗವಹಿಸಲಿದ್ದಾರೆ.

ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಮುಖ್ಯಸ್ಥ ಕೆ.ಎಲ್. ಅಶೋಕ್, ವಿ.ಪಿ. ಶಶಿಧರ್, ವಕೀಲ ಕೆ.ಆರ್. ವಿದ್ಯಾಧರ್ ಕಾರ್ಯಕ್ರಮವನ್ನು ನಿರ್ವಹಿಸಲಿದ್ದಾರೆ.

ವಿವಿಧೆಡೆ ಕಿಟ್ ವಿತರಣೆ

ಎ.ಕೆ. ಸುಬ್ಬಯ್ಯ ಅವರು ನಿಧನರಾಗಿ ಒಂದು ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಎ.ಕೆ. ಸುಬ್ಬಯ್ಯ-ಪೆÇನ್ನಮ್ಮ ದತ್ತಿ ಮತ್ತು ಶೈಕ್ಷಣಿಕ ಟ್ರಸ್ಟ್ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಟ್ರಸ್ಟ್‍ನ ವ್ಯವಸ್ಥಾಪಕ ಟ್ರಸ್ಟಿಗಳೂ ಆಗಿರುವ, ಹಿರಿಯ ವಕೀಲ ಮತ್ತು ಎ.ಕೆ.ಎಸ್. ಪುತ್ರ ಅಜ್ಜಿಕುಟ್ಟೀರ ಎಸ್. ಪೆÇನ್ನಣ್ಣ ತಿಳಿಸಿದ್ದಾರೆ.

ತಾ. 27 ರಂದು ಬೆಳಿಗ್ಗೆ 9 ಗಂಟೆಗೆ ಹುದಿಕೇರಿ ಸಮೀಪದ ಕೋಣಗೇರಿಯ ಕಲ್ಲುಗುಂಡಿ ಎಸ್ಟೇಟ್‍ನಲ್ಲಿರುವ ಸುಬ್ಬಯ್ಯ ಅವರ ಸಮಾಧಿ ಬಳಿ ನೂತನವಾಗಿ ನಿರ್ಮಿಸಲಾಗಿರುವ ಶಿಲಾಸ್ಮಾರಕದ ಅನಾವರಣ ನಡೆಯಲಿದೆ.

3 ದಿನಗಳ ಕಾಲ ಜಿಲ್ಲೆಯ ವಿವಿಧೆಡೆ ಅರ್ಹ ಫಲಾನುಭವಿಗಳಿಗೆ ದಿನಸಿ ಕಿಟ್‍ಗಳ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತಾ. 27 ರಂದು ಬೆಳಿಗ್ಗೆ 11.30 ಗಂಟೆಗೆ ನಾಪೆÇೀಕ್ಲಿನ ಸಂತೆಮಾಳ ಆವರಣದಲ್ಲಿ ಮೊದಲ ದಿನದ ದಿನಸಿ ಕಿಟ್‍ಗಳ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ನಂತರ ಇತ್ತೀಚಿಗೆ ಸುರಿದ ಭಾರೀ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳುವ ಕಾರ್ಯಕ್ರಮವಿದೆ ಎಂದು ತಿಳಿಸಿದ್ದಾರೆ.

ತಾ. 28 ರಂದು 2ನೇ ದಿನದ ಕಾರ್ಯಕ್ರಮವಾಗಿ ವೀರಾಜಪೇಟೆಯಲ್ಲಿ ದಿನಸಿ ಕಿಟ್ ವಿತರಣಾ ಕಾರ್ಯಕ್ರಮ ನಡೆಯಲಿದ್ದು, ಬೆಳಿಗ್ಗೆ 10 ಗಂಟೆಗೆ ಅರಸು ನಗರ, ಬೆಳಿಗ್ಗೆ 11 ಗಂಟೆಗೆ ಮಾರಿಯಮ್ಮ ದೇವಸ್ಥಾನದ ಆವರಣ, ಮಧ್ಯಾಹ್ನ 12 ಗಂಟೆಗೆ ಸುಣ್ಣದ ಬೀದಿಯ ಸಮುದಾಯ ಭವನ ಮತ್ತು ಮಧ್ಯಾಹ್ನದ ನಂತರ ವೀರಾಜಪೇಟೆಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅರ್ಹ ಫಲಾನುಭವಿಗಳಿಗೆ ದಿನಸಿ ಕಿಟ್‍ಗಳನ್ನು ವಿತರಿಸಲಾಗುವುದು.

ತಾ. 29 ರಂದು 3ನೇ ದಿನದ ಕಾರ್ಯಕ್ರಮವಾಗಿ ಬೆಳಿಗ್ಗೆ 10 ಗಂಟೆಗೆ ಮಾಲ್ದಾರೆ ಸಮೀಪದ ದಿಡ್ಡಳ್ಳಿಯ ಗಿರಿಜನ ಹಾಡಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಫಲಾನುಭವಿಗಳಿಗೆ ದಿನಸಿ ಕಿಟ್‍ಗಳನ್ನು ವಿತರಿಸಲಾಗುವುದು. ಈಗಾಗಲೇ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಟೋಕನ್ ವಿತರಿಸಲಾಗಿದ್ದು, ಟೋಕನ್ ತಂದವರಿಗೆ ಕಾರ್ಯಕ್ರಮದಲ್ಲಿ ದಿನಸಿ ಕಿಟ್‍ಗಳನ್ನು ನೀಡಲಾಗುವುದು ಎಂದು ಪೊನ್ನಣ್ಣ ಹೇಳಿದ್ದಾರೆ.