ಕೂಡಿಗೆ, ಆ. 24: ಕುಶಾಲನಗರ ವಲಯಕ್ಕೆ ಸೇರಿದ ಬೆಂಡೆಬೆಟ್ಟ ಮೂಲಕ ಬರುವ ಕಾಡಾನೆಗಳು ಸಮೀಪದಲ್ಲಿ ಹರಿಯುವ ಹಾರಂಗಿ ನದಿಯನ್ನು ದಾಟಿ ಹಾರಂಗಿಯ ಅಚ್ಚುಕಟ್ಟು ಪ್ರದೇಶದ ನೂರಾರು ಎಕರೆ ಪ್ರದೇಶದಲ್ಲಿ ಬೆಳೆಯಲಾದ ಭತ್ತ, ಬಾಳೆ, ಶುಂಠಿ, ಸುವರ್ಣಗೆಡ್ಡೆ ಸೇರಿದಂತೆ ಅನೇಕ ಬಗೆಯ ಬೆಳೆಗಳನ್ನು ನಾಶಪಡಿಸಿವೆ.

ಕುಶಾಲನಗರ ಅರಣ್ಯ ಇಲಾಖೆ ಮತ್ತು ಅದಕ್ಕೆ ಸೇರಿದ ಉಪವಲಯ ಸಿಬ್ಬಂದಿ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ನೆಡೆಸಿದರೂ ಒಂದು ಕಾಡಾನೆಯೂ ಕಾಡಿಗೆ ಸೇರಿಲ್ಲ. ಕಳೆದ ಒಂದು ವರ್ಷಗಳಿಂದ ಈ ವ್ಯಾಪ್ತಿಯಲ್ಲಿ ಕಾಡಾನೆಗಳಿಂದ ಬೆಳೆನಾಶವಾಗುತ್ತಿದ್ದರೂ, ಅರಣ್ಯ ಇಲಾಖೆ ಈ ಬಗ್ಗೆ ಗಮನ ಹರಿಸುತ್ತಿಲ್ಲ. ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಈ ಭಾಗದ ರೈತರು ಆರೋಪಿಸಿದ್ದಾರೆ.

-ಕೆ.ಕೆ.ಎನ್.