ಕೂಡಿಗೆ, ಆ. 23: ಕೂಡಿಗೆಯಲ್ಲಿರುವ. ತೋಟಗಾರಿಕೆ ಕೃಷಿ ಕ್ಷೇತ್ರದ ಆವರಣದಲ್ಲಿ ತಾಲೂಕಿನ ರೈತರಿಗೆ ಅವರುಗಳ ಜಮೀನಿನ ಆಧಾರದ ಮೇಲೆ ಕಾಳು ಮೆಣಸು ಗಿಡಗಳನ್ನು ವಿತರಣೆ ಮಾಡಲಾಗುತ್ತಿದೆ.
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯ ಅಡಿಯಲ್ಲಿ ಜಿಲ್ಲಾ ಪಂಚಾಯತಿ ಸಹಕಾರದಲ್ಲಿ ಬೆಳೆಸಲಾದ. ಒಂದು ಲಕ್ಷ ಕಾಳು ಮೆಣಸು ಗಿಡಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ರೈತರಿಗೆ ಗಿಡಗಳನ್ನು ವಿತರಣೆ ಮಾಡುವ ಮೂಲಕ. ಸೋಮವಾರಪೇಟೆ ತಾಲೂಕು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಎಸ್. ಶೋಭ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೂಡಿಗೆ ಕ್ಷೇತ್ರದ ಅಧಿಕಾರಿ ಎಸ್. ಆನಂದ ಸೇರಿದಂತೆ ಸಿಬ್ಬಂದಿ ವರ್ಗವರು ಮತ್ತು ತಾಲೂಕಿನ ರೈತರು ಹಾಜರಿದ್ದರು.