ಪೆÇನ್ನಂಪೇಟೆ, ಆ.24: ಅರಣ್ಯದಿಂದ ಗ್ರಾಮಗಳಿಗೆ ನುಸುಳಿ ಕೃಷಿ ಫಸಲನ್ನು ನಾಶಮಾಡುತ್ತಿರುವ ಕಾಡಾನೆಗಳನ್ನು ಮರಳಿ ಕಾಡಿಗೆ ಅಟ್ಟುವ ಕಾರ್ಯಾಚರಣೆಯನ್ನು ತಾ.25(ಇಂದು) ಹಾಗೂ ತಾ.26 ರಂದು ಹಮ್ಮಿಕೊಂಡಿರುವದಾಗಿ ಪೆÇನ್ನಂಪೇಟೆ ವಲಯಾರಣ್ಯಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ. ಈ ಸಂಬಂಧ ಗ್ರಾಮಸ್ಥರು ಎಚ್ವರಿಕೆ ವಹಿಸುವ ಸಲುವಾಗಿ ಗೋಣಿಕೊಪ್ಪಲು, ಅರುವತ್ತೊಕ್ಕಲು, ಪೆÇನ್ನಂಪೇಟೆ ಹಾಗೂ ಕಿರುಗೂರು ಗ್ರಾ.ಪಂ. ಪಿಡಿಓಗಳಿಗೆ ಪತ್ರ ಬರೆದಿರುವದಾಗಿ ತಿಳಿಸಿದೆ.ತಾ.25 ಮತ್ತು 26ರಂದು ಕಿರುಗೂರು, ಮತ್ತೂರು,ಹಳ್ಳಿಗಟ್ಟು ಮತ್ತು ಅರುವತ್ತೊಕ್ಕಲು ಗ್ರಾಮಗಳಲ್ಲಿ ಮತ್ತು ಅದಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಆನೆಗಳನ್ನು ಓಡಿಸುವ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು, ಕಾರ್ಮಿಕರು, ಮಕ್ಕಳು ಎಚ್ಚರಿಕೆಯಿಂದಿರಲು ಇಲಾಖಾಧಿಕಾರಿಗಳು ಮನವಿ ಮಾಡಿದ್ದಾರೆ. ಹೆಚ್ಚಿನ ವಿವರಗಳಿಗೆ ಪಿ.ಎ.ತೀರ್ಥ, ವಲಯಾರಣ್ಯಾಧಿಕಾರಿ (9482636336) ಅಥವಾ ಕೆ.ಜಿ.ದಿವಾಕರ, ಉಪ ವಲಯ ಅರಣ್ಯಾಧಿಕಾರಿ (7349090619) ಗಳಿಗೆ ಕರೆ ಮಾಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.