ಶ್ರೀಮಂಗಲ, ಆ. 23: ಕಾವೇರಿ ಉಗಮಸ್ಥಾನ ತಲಕಾವೇರಿ ಮತ್ತು ಭಾಗಮಂಡಲ ಕ್ಷೇತ್ರದಲ್ಲಿ ಈ ಹಿಂದಿನಂತೆ ಅಮ್ಮಕೊಡವ ಜನಾಂಗ ಈ ಕ್ಷೇತ್ರದಲ್ಲಿ ಪೌರೋಹಿತ್ಯ ಸೇವೆ ಸಲ್ಲಿಸಲು ಮುಂದಾಗಿರುವುದನ್ನು ಪೆÇನ್ನಂಪೇಟೆ ಕೊಡವ ಸಮಾಜ ಸ್ವಾಗತಿಸುತ್ತದೆ ಹಾಗೂ ಈ ನಿಟ್ಟಿನಲ್ಲಿ ಅಮ್ಮಕೊಡವ ಸಮಾಜಕ್ಕೆ ಸಂಪೂರ್ಣ ಬೆಂಬಲವನ್ನು ನೀಡುತ್ತದೆ ಎಂದು ಪೆÇನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಯಕ್ಮಾಡ ರಾಜೀವ್ ಬೋಪಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪೆÇನ್ನಂಪೇಟೆ ಕೊಡವ ಸಮಾಜದಲ್ಲಿ ನಡೆದ ಸಮಾಜದ ಆಡಳಿತ ಮಂಡಳಿಯ ಸಭೆಯಲ್ಲಿ ಈ ಕ್ಷೇತ್ರದಲ್ಲಿ ನಾನಾ ಕಾರಣದಿಂದ ಮೂಲ ಅರ್ಚಕರಾಗಿದ್ದ ಅಮ್ಮ ಕೊಡವರಿಗೆ ಈ ಕ್ಷೇತ್ರದಲ್ಲಿ ಪೌರೋಹಿತ್ಯ ನೀಡುವುದು ಸಮರ್ಥನೀಯವಾಗಿದೆ ಎಂದು ಹೇಳಿದರು.
ಈ ಹಿಂದೆ ಕ್ಷೇತ್ರದಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆ ಕಾರ್ಯಕ್ರಮದಲ್ಲಿ ತಕ್ಕಾಮೆಯ ಬಗ್ಗೆ ಹಾಗೂ ಈ ಅಮ್ಮಕೊಡವರ ಪೌರೋಹಿತ್ಯದ ಬಗ್ಗೆ ಪ್ರಸ್ತಾಪವಾಗಿದ್ದು, ಇದೀಗ ಇಲ್ಲಿ ಪೂಜೆ ನಡೆಸುತ್ತಿದ್ದ ಅರ್ಚಕ ಸಮುದಾಯದ ಕುಟುಂಬವೇ ಪ್ರಾಕೃತಿಕ ವಿಕೋಪಕ್ಕೆ ಅಳಿದು ಹೋಗಿರುವ ಕಾರಣ ಬದಲಿ ವ್ಯವಸ್ಥೆ ಮಾಡಲೇಬೇಕಾಗಿದೆ; ಈ ಹಿಂದೆ ಇಲ್ಲಿ ಮೂಲ ಅರ್ಚಕರಾಗಿ ಪೂಜೆ ವಿಧಿವಿಧಾನವನ್ನು ನಡೆಸುತ್ತಿದ್ದ ಅಮ್ಮಕೊಡವರಿಗೆ ನೀಡುವುದು ಸೂಕ್ತ ಎಂದು ಅಭಿಪ್ರಾಯ ಪಟ್ಟರು. ಹಾಗೇಯೇ ಇಲ್ಲಿ ಈ ಹಿಂದೆ ಮಂಡೀರ, ಮಣವಟ್ಟೀರ ಮತ್ತು ಪಟ್ಟಮಾಡ ಕುಟುಂಬಗಳ ತಕ್ಕಾಮೆಯ ವಿಷಯ ಕೂಡ ಅಷ್ಟಮಂಗಲ ಕಾರ್ಯದಲ್ಲಿ ಪ್ರಸ್ತಾಪವಾಗಿದ್ದು, ಇದನ್ನು ಕೂಡ ಗಂಭೀರವಾಗಿ ಪರಿಗಣನೆ ತೆಗೆದುಕೊಂಡು ಈ ಕುಟುಂಬದವರನ್ನು ಸಹ ಮುಂದಿಟ್ಟುಕೊಂಡು ಪೂಜಾ ಕಾರ್ಯ, ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಗಳನ್ನು ನಡೆಸಬೇಕಾಗಿದೆ ಎಂದು ಹೇಳಿದರು.
ಗೌರವ ಕಾರ್ಯದರ್ಶಿ ಪೊನ್ನಿಮಾಡ ಸುರೇಶ್, ಖಜಾಂಚಿ ಮೂಕಳೇರ ಲಕ್ಷ್ಮಣ್, ಉಪಾಧ್ಯಕ್ಷ ಚೆಪ್ಪುಡೀರ ಬೋಪಣ್ಣ, ನಿರ್ದೇಶಕರುಗಳಾದ ಮಲ್ಲಮಾಡ ಪ್ರಭುಪೂಣಚ್ಚ, ಚೆಟ್ಟೆಕಾಳಪಂಡ ಆಶಾ ಪ್ರಕಾಶ್ ಹಾಜರಿದ್ದರು.