ಕೂಡಿಗೆ, ಆ. 23: ಹೆಬ್ಬಾಲೆ ಗ್ರಾಮ ಪಂಚಾಯತಿಯ ಎದುರು ಇರುವ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ವತಿಯಿಂದ ಅರಂಭಗೊಂಡಿರುವ ಹೆಬ್ಬಾಲೆಯ ಗ್ರಂಥಾಲಯವು ವಾರಕ್ಕೆ ಒಂದು ದಿನ ಮಾತ್ರ ತೆರಯುತ್ತಿದೆ ಇದರಿಂದ ಗ್ರಂಥಾಲಯದಲ್ಲಿ ಪುಸ್ತಕ ಮತ್ತು ಪತ್ರಿಕೆ ಗಳ ಓದುಗರಿಗೆ ಬಾರಿ ಅನ್ಯಾಯವಾಗಿದೆ ಎಂದು ಹೆಬ್ಬಾಲೆಯ ಸಾರ್ವಜನಿಕರ ಆರೋಪಿಸಿದ್ದಾರೆ.
ಹೆಬ್ಬಾಲೆ ಗ್ರಂಥಾಲಯಕ್ಕೆ ಓದುಗರಿಗೆ ಬೇಕಾಗುವಂತಹ ಪತ್ರಿಕೆ ಗಳನ್ನು ಖರೀದಿಸಲು ಅನುಮತಿ ಇದ್ದರೂ ಸಹ ಪತ್ರಿಕೆಗಳ ಲಭ್ಯತೆ ಇರುವುದಿಲ್ಲ ಅಲ್ಲದೆ ಗ್ರಾಮ ಪಂಚಾಯತಿಯ ನಿಯಮನುಸಾರ ಗ್ರಂಥಾಲಯಕ್ಕೆ ಬೇಕಾಗುವ ಹಣವನ್ನು ನೀಡಲಾಗುತ್ತಿದೆ ಅದರೂ ಸಹ ಗ್ರಂಥಾಲಯ ಸಿಬ್ಬಂದಿ ತೆರೆಯಲು ಮುಂದಾಗದೆ ಮನಬಂದಂತೆ ವರ್ತಿಸುತ್ತಾರೆ ಎಂದು ಗ್ರಾಮದ ನಿವೃತ್ತ ಸರಕಾರಿ ನೌಕರರುಗಳಾದ ಪುಟ್ಟರಾಜ ಶಿವಣ್ಣ. ದೇವರಾಜು ಸೇರಿದಂತೆ ಇತರರು ಆರೋಪಿಸಿದ್ದಾರೆ.