ಸುಂಟಿಕೊಪ್ಪ, ಆ. 21: ಸರಕಾರದ ಆದೇಶದ ಮೇರೆ ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ 54ನೇ ವರ್ಷದ ಶ್ರೀ ಗೌರಿ-ಗಣೇಶೋತ್ಸವವನ್ನು ಅತಿ ಸರಳ ರೀತಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ.

ಶ್ರೀ ರಾಮ ಮಂದಿರದಲ್ಲಿ ಸರಳ ರೀತಿಯಲ್ಲಿ ಗೌರಿ ಗಣೇಶ ಆಚರಣಾ ಸಮಿತಿಯ ಪದಾಧಿಕಾರಿಗಳು ಅಲಂಕಾರಗೊಳಿಸಿದ್ದಾರೆ. ತಾ. 22 ರಂದು ಬೆಳಿಗ್ಗೆ 8.30ಕ್ಕೆ ಗಣಹೋಮ. 10.30ಕ್ಕೆ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ನಡೆಯಲಿದೆ. ತಾ. 26 ರಂದು ಬೆಳಿಗ್ಗೆ 8.30ಕ್ಕೆ ಗಣಹೋಮ, 10.20ಕ್ಕೆ ವಿಸರ್ಜನೆ ಪೂಜೆಯ ನಂತರ ಗದ್ದೆಹಳ್ಳದ ಯಂಕನ ಉಲ್ಲಾಸ್ ಮತ್ತು ಯಂಕನ ಕರುಂಬಯ್ಯ ಅವರ ಕೆರೆಯಲ್ಲಿ ಧಾರ್ಮಿಕ ಕೈಂಕರ್ಯಗಳೊಂದಿಗೆ ಮೆರವಣಿಗೆ ಇಲ್ಲದೇ ಸರಳವಾಗಿ ವಿಸರ್ಜಿಸಲಾಗುವುದು.

ತಾ. 25 ರವರೆಗೆ ಬೆಳಿಗ್ಗೆ 6.30 ರಿಂದ 12 ಮತ್ತು ಸಂಜೆ 6.30 ರಿಂದ ರಾತ್ರಿ 8.30 ರವರೆಗೆ ಭಕ್ತಾದಿಗಳಿಗೆ ಪೂಜೆ ಮತ್ತು ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಬಿ.ಎಂ. ಸುರೇಶ್ ತಿಳಿಸಿದ್ದಾರೆ.