ಶನಿವಾರಸಂತೆ, ಆ. 21: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿಯ ಗ್ರಂಥಾಲಯದಲ್ಲಿ ಭಾರತದ ಗ್ರಂಥಾಲಯ ಪಿತಾಮಹಾ ಡಾ. ಎಸ್.ಆರ್. ರಂಗನಾಥ್ ಅವರ ಜನ್ಮ ದಿನವನ್ನು ‘ಗ್ರಂಥಪಾಲಕ’ ದಿನಾಚರಣೆಯನ್ನಾಗಿ ಆಚರಿಸಲಾಯಿತು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯದರ್ಶಿ ವೇಣುಗೋಪಾಲ್, ಗ್ರಂಥಪಾಲಕಿ ಎಸ್.ಪಿ. ದಿವ್ಯಾ, ಚುಟುಕು ಕವಿ ಕಸಾಪ, ಸದಸ್ಯ ಕೆ.ವಿ. ಪುಟ್ಟಣ್ಣಾಚಾರ್ಯ, ಪೂರ್ಣಿಮಾ, ಸುನೀತಾ ತಮ್ಮೇಗೌಡ ಹಾಗೂ ಗ್ರಂಥಾಲಯ ಸದಸ್ಯರು ಹಾಜರಿದ್ದರು.