ವೀರಾಜಪೇಟೆ, ಆ. 21: ಯಾವುದೇ ಸದ್ದುಗದ್ದಲವಿಲ್ಲದೆ ಆಡಂಬರವಿಲ್ಲದೆ ಸರಳವಾಗಿ ಪಂಚಾಂಗದಂತೆ ಭಾದ್ರಪದ-ಅಧಿಕ ಅಶ್ವಯುಜ ಮಾಸದಲ್ಲಿ ಐತಿಹಾಸಿಕ ಇತಿಹಾಸ ಪ್ರಸಿದ್ಧವಾದ ಗೌರಿ ವೃತ ಆಚರಿಸಲಾಗಿದ್ದು,ತಾ. 21ರಂದು (ಇಂದು) ವೀರಾಜಪೇಟೆಯ ವಿವಿಧೆಡೆಗಳಲ್ಲಿ ಗಣೇಶನ ಪ್ರತಿಷ್ಠಾಪನೆ ನಡೆಯಲಿದೆ. ವೀರಾಜಪೇಟೆ ಪಟ್ಟಣ ವ್ಯಾಪ್ತಿಯಲ್ಲಿ 21 ಉತ್ಸವ ಸಮಿತಿಗಳು ಗಣೇಶನ ಪ್ರತಿಷ್ಠಾಪನೆಗೆ ಸಿದ್ಧತೆ ನಡೆಸಿದ್ದು, ಪೂರ್ವಾಹ್ನ ಶುಭ ಮುಹೂರ್ತದಲ್ಲಿ ಗಣೇಶನ ಪ್ರತಿóಷ್ಠಾಪನೆ ನಡೆಯಲಿದೆ. ಹಿಂದಿನಂತೆಯೇ ವಿವಿಧ ಉತ್ಸವ ಸಮಿತಿಗಳು ಆಯ್ದ ಸ್ಥಳಗಳಲ್ಲಿ ಗಣೇಶನ ಪ್ರತಿಷ್ಠಾಪನೆಗೆ ಕೋವಿಡ್-19 ಷರತ್ತಿನ ನಡುವೆಯೂ ಸರಕಾರ ಅವಕಾಶ ಕಲ್ಪಿಸಿರುವುದರಿಂದ 21 ಉತ್ಸವ ಸಮಿತಿಗಳ ಪೈಕಿ 9 ಉತ್ಸವ ಸಮಿತಿಗಳು ತಾ.22ರ ರಾತ್ರಿಯೇ ಗಣೇಶನ ಮೂರ್ತಿಯನ್ನು ವಿಸರ್ಜಿಸಲಿದ್ದರೆ ಉಳಿದ 9 ಸಮಿತಿಗಳು ಮೂರು ದಿನಗಳ ನಂತರ ಸೋಮವಾರ ದಿನ ವಿಸರ್ಜಿಸಲಿವೆ. ಇನ್ನು 3 ಉತ್ಸವ ಸಮಿತಿಗಳು 11 ದಿನಗಳವರೆಗೆ ಅಪರಾಹ್ನ ರಾತ್ರಿ ಪೂಜೆ ನಡೆಸಿ ಅನಂತಪದ್ಮನಾಭ ವೃತದ ಸೆ.1 ರಂದು ಸಂಜೆ ಗೌರಿ-ಗಣೇಶನ ವಿಸರ್ಜನೆಯನ್ನು ಇಲ್ಲಿನ ಪವಿತ್ರ ಗೌರಿಕೆರೆಯಲ್ಲಿ ನಡೆಸಲಿವೆ.

ವೀರಾಜಪೇಟೆ ಬಸವೇಶ್ವರ ದೇವಸ್ಥಾನದ ಗೌರಿ-ಗಣೇಶಉತ್ಸವ ಸಮಿತಿ, ಗಡಿಯಾರ ಕಂಬದ ಬಳಿಯಿರುವ ಗಣಪತಿ ದೇವಾಲಯ ಹಾಗೂ ಅಪ್ಪಯ್ಯ ಸ್ವಾಮಿ ರಸ್ತೆಯ ಬಾಲಾಂಜನೇಯ ಗಣೇಶೋತ್ಸವ ಸಮಿತಿ ಸೆ. 1 ರಂದು ಸಂಜೆ ವಿಸರ್ಜನೆಗೆ ಸಿದ್ಧತೆ ಮಾಡಿವೆ.

ನೆಹರೂನಗರದ ನೇತಾಜಿ ಉತ್ಸವ ಸಮಿತಿ, ಪಂಜರ್‍ಪೇಟೆ ಗಣಪತಿ ಬೀದಿಯ ಮಹಾಗಣಪತಿ ಸಮಿತಿ, ಪಂಜರುಪೇಟೆಯ ವಿನಾಯಕ ಸೇವಾ ಸಮಿತಿ, ಗಾಂಧಿನಗರದ ಗಣಪತಿ ಸೇವಾ ಸಮಿತಿ, ಮಲೆತಿರಿಕೆಬೆಟ್ಟದ ಕಣ್ಮಣಿ ಗಣಪತಿ ಯುವಕ ಸಂಘ, ಸುಣ್ಣದ ಬೀದಿಯ ದೊಡ್ಡಮ್ಮ ಚಿಕ್ಕಮ್ಮತಾಯಿ ವಿನಾಯಕ ಸಮಿತಿ, ಮೀನುಪೇಟೆಯ ವಿಶ್ವ ವಿನಾಯಕ ಗಣೇಶೋತ್ಸವ ಸಮಿತಿ, ಗೌರಿಕೆರೆಯ ಗಣಪತಿ ಸೇವಾ ಸಮಿತಿ, ಪಟ್ಟಣ ಪಂಚಾಯಿತಿ ಪೌರ ಸೇವಾ ನೌಕರರ ಗಣಪತಿ ಸೇವಾ ಸಮಿತಿಗಳು ಸೇರಿದಂತೆ 9 ಉತ್ಸವ ಸಮಿತಿಗಳು ತಾ. 22ರಂದು (ಇಂದು) ಇಲ್ಲಿನ ಗೌರಿಕೆರೆಯಲ್ಲಿ ವಿಸರ್ಜನೋತ್ಸವಕ್ಕೆ ಸಿದ್ಧತೆ ನಡೆಸಿವೆ.

ಇಲ್ಲಿನ ಅರಸುನಗರದ ವಿಘ್ನೇಶ್ವರ ಸೇವಾ ಸಮಿತಿ,

(ಮೊದಲ ಪುಟದಿಂದ) ದಖ್ಖನಿ ಮೊಹಲ್ಲಾದ ವಿಜಯ ವಿನಾಯಕ ಉತ್ಸವ ಸಮಿತಿ, ತೆಲುಗರ ಬೀದಿಯ ಅಂಗಾಳಪರಮೇಶ್ವರಿ ದೇವಸ್ಥಾನದ ವಿನಾಯಕ ಯುವಕ ಭಕ್ತ ಮಂಡಳಿ, ಮೂರ್ನಾಡು ರಸ್ತೆಯ ಕಾವೇರಿ ಗಣೇಶೋತ್ಸವ ಸಮಿತಿ, ಚಿಕ್ಕಪೇಟೆಯ ಜಲದರ್ಶಿನಿ ಗಣೇಶೋತ್ಸವ ಸಮಿತಿ, ಕೆ.ಬೋಯಿಕೇರಿಯ ವಿಘ್ನೇಶ್ವರ ಸೇವಾ ಸಮಿತಿ, ಕುಕ್ಲೂರು ವಿನಾಯಕ ಯುವಕ ಸಮಿತಿ, ಅಯ್ಯಪ್ಪಬೆಟ್ಟದ ವರದ ವಿನಾಯಕ ಸೇವಾ ಉತ್ಸವ ಸಮಿತಿ ಹಾಗೂ ಸುಂಕದಕಟ್ಟೆಯ ಸರ್ವಸಿದ್ಧಿ ವಿನಾಯಕ ಉತ್ಸವ ಸಮಿತಿಗಳು ತಾ.24 ರಂದು ಸಂಜೆ ಗೌರಿಕೆರೆಯಲ್ಲಿಯೇ ವಿಸರ್ಜ ನೋತ್ಸವಕ್ಕೆ ಸಿದ್ಧತೆ ಮಾಡಿವೆ.

ವೀರರಾಜೇಂದ್ರಪೇಟೆ ಐತಿಹಾಸಿಕ ಗೌರಿ ನಾಡಹಬ್ಬದ ಒಕ್ಕೂಟದ ಅಧ್ಯಕ್ಷ ಬಿ.ಜಿ. ಸಾಯಿನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ 21 ಉತ್ಸವ ಸಮಿತಿಗಳ ಪ್ರತಿನಿಧಿಗಳ ಸಭೆಯಲ್ಲಿ ಕೋವಿಡ್-19ನ್ನು ಆಧರಿಸಿ ಗೌರಿ-ಗಣೇಶನ ಪ್ರತಿಷ್ಠಾಪನೆ ಹಾಗೂ ವಿಸರ್ಜ ನೋತ್ಸವದ ಕುರಿತು ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ.

ಎಲ್ಲ ಉತ್ಸವ ಸಮಿತಿಗಳಿಗೆ ಅಪರಾಹ್ನ ಮೂರು ಗಂಟೆಯಿಂದ ಸಂಜೆ ಆರು ಗಂಟೆಯ ತನಕ ಪರಂಪರೆ ಸಂಪ್ರದಾಯದಂತೆ ಇಲ್ಲಿನ ಗೌರಿಕೆರೆಯಲ್ಲಿ ವಿಸರ್ಜನೋತ್ಸವಕ್ಕೆ ಅನುವು ಮಾಡಿಕೊಡಲಾಗಿದೆ. ಪ್ರತಿಯೊಂದು ಉತ್ಸವ ಸಮಿತಿಗಳು ಕೋವಿಡ್-19ರ ಮಾರ್ಗ ಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ ಎಂದು ಸಾಯಿನಾಥ್ ತಿಳಿಸಿದ್ದಾರೆ.