ನಾಪೆÇೀಕ್ಲು, ಆ. 21: ನಾಪೆÇೀಕ್ಲು ಲಯನ್ಸ್ ಕ್ಲಬ್ ವತಿಯಿಂದ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡಿರುವ ಕೈಕಾಡು ಗ್ರಾಮದ ಪೇರಿಯಂಡ ಮೋಹನ್ ಕುಟುಂಬಕ್ಕೆ ಧನ ಸಹಾಯ ಮಾಡಲಾಯಿತು. ಈ ಸಂದರ್ಭ ಅಧ್ಯಕ್ಷ ಬೊಳ್ಳಂಡ ಶ್ಯಾಮ್ ಬಿದ್ದಪ್ಪ, ಮೋಹನ್ ಅವರಿಗೆ 10 ಸಾವಿರ ರೂ. ಸಹಾಯಧನ ನೀಡಲಾಗಿದೆ ಎಂದರು. ಲಯನ್ಸ್ ಕಾರ್ಯದರ್ಶಿ ಕನ್ನಂಬಿರ ಸುಧಿ ತಿಮ್ಮಯ್ಯ, ಖಜಾಂಚಿ ಕೇಲೇಟಿರ ದೀಪು ದೇವಯ್ಯ, ಪದಾಧಿಕಾರಿಗಳಾದ ಕೇಟೋಳಿರ ರತ್ನಾ ಚರ್ಮಣ್ಣ, ಮುಕ್ಕಾಟಿರ ವಿನಯ್, ಎಳ್ತಂಡ ಬೋಪಣ್ಣ, ಚೌರೀರ ಉದಯ, ಅಪ್ಪಚೆಟ್ಟೋಳಂಡ ನವೀನ್ ಅಪ್ಪಯ್ಯ ಇದ್ದರು.