ಸೂರ್ಲಬ್ಬಿ: ಸೂರ್ಲಬ್ಬಿ ಗ್ರಾಮದ ಶ್ರೀ ಕಾಳತಮ್ಮೆ ಮಹಿಳಾ ಸ್ವಸಹಾಯ ಸಂಘದಿಂದ ಅಲ್ಲಿನ ಅಂಚೆ ಕಚೇರಿ ಆವರಣವನ್ನು ಸ್ವಚ್ಛಗೊಳಿಸಿ ಶ್ರಮದಾನ ಮಾಡಲಾಯಿತು. ಈ ಸಂದರ್ಭ ಸ್ವಸಹಾಯ ಸಂಘದ ಮಹಿಳಾ ಪದಾಧಿಕಾರಿಗಳು, ಸದಸ್ಯೆಯರು ಪಾಲ್ಗೊಂಡಿದ್ದರು.

ಕಡಂಗ: ಕಡಂಗ ದಿಂದ ಎಡಪಾಲಕ್ಕೆ ಹೋಗುವ ರಸ್ತೆಯು ಮಳೆಯಿಂದ ಮಣ್ಣು ಕಲ್ಲು ಬಂದು ವಾಹನ ಸವಾರರಿಗೆ ಸಂಕಷ್ಟ ಎದುರಾದಾಗ ಎಡಪಾಲ ಕಾರ್ಯಕರ್ತರು ಸುಮಾರು 4 ಕಿ.ಮೀ. ದೂರ ಶ್ರಮದಾನ ಮಾಡಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಕಾರ್ಯಾಚರಣೆಯಲ್ಲಿ ಹನೀಫ ಎರಟೆಂಡ, ಸಿನಾನ್ ನೇತೃತ್ವದಲ್ಲಿ ಸದಸ್ಯರುಗಳಾದ ಇಸ್ಮಾಯಿಲ್, ಇಂಬ್ರಾನ್, ಅಸ್ಲಮ್, ಹಾರಿಸ್, ಸಲಹುದ್ದೀನ್, ಯಾಸೀನ್, ಅಫ್ರೀದ್, ನೌಫಲ್, ನಾಫಿ ಸಹದ್ ಪಾಲ್ಗೊಂಡಿದ್ದರು.ಸುಂಟಿಕೊಪ್ಪ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗದ್ದೆಹಳ್ಳ ಒಕ್ಕೂಟದ ವತಿಯಿಂದ ಶೃದ್ಧಾ ಕಾರ್ಯಕ್ರಮದ ಅಂಗವಾಗಿ ಗದ್ದೆಹಳ್ಳದ ಶ್ರೀ ಕೊಡಂಗಲ್ಲೂರು ಭದ್ರಕಾಳಿ ಶ್ರೀಕುರುಂಭ (ಭಗವತಿ) ದೇವಸ್ಥಾನವನ್ನು ಸ್ವಚ್ಛಗೊಳಿಸಲಾಯಿತು.

ಸ್ವಾತಂತ್ರ್ಯ ದಿನಾಚರಣೆ ಹಾಗೂ ಶ್ರೀ ಧರ್ಮಸ್ಥಳ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಶೃದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮದಡಿ ಗದ್ದೆಹಳ್ಳದ ಸೇವಾ ಪ್ರತಿನಿಧಿ ಜ್ಯೋತಿ ಲಕ್ಷ್ಮೀ ಹಾಗೂ ಒಕ್ಕೂಟದ ಅಧ್ಯಕ್ಷೆ ನಾಗರತ್ನ ಸುರೇಶ್ ನೇತೃತ್ವದಲ್ಲಿ ಈ ಭಾಗದ ಸ್ವ ಸಹಾಯ ಸಂಘಗಳಾದ ರಾಜ ರಾಜೇಶ್ವರಿ, ಕಾವೇರಿ, ಜನನಿ, ಬಾಂಧವ್ಯ, ರಾಣಿ, ಶಾರದಾಂಭ, ಪುಣ್ಯಕೋಟಿ ಮತ್ತು ಶ್ರೀರಾಮ ಸಂಘದ ಸದಸ್ಯರುಗಳು ಒಗ್ಗೂಡಿ ಸ್ವಚ್ಛತೆ ನೆರವೇರಿಸಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪಿ.ಆರ್. ಸುಕುಮಾರ್ ಮತ್ತಿತರರು ಇದ್ದರು.