ಮಡಿಕೇರಿ, ಆ. 21: ತಾ. 21ರಂದು ಸಿಇಟಿ ಫಲಿತಾಂಶ ಪ್ರಕಟವಾಗಿದ್ದು, ಕೊಡಗಿನ ವಿದ್ಯಾರ್ಥಿಗಳು ಅತ್ಯುತ್ತಮ ರ್ಯಾಂಕ್ ಪಡೆಯುವುದರ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಮಡಿಕೇರಿ ಅಶ್ವಿನಿ ಆಸ್ಪತ್ರೆಯಲ್ಲಿ ಹಿರಿಯ ವೈದ್ಯರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಡಾ. ಕುಲಕರ್ಣಿ ಹಾಗೂ ಡಾ. ಅರುಣಾ ದಂಪತಿಯ ಪುತ್ರ ಶಶಾಂಕ್ ಪಿ. ಸಿಇಟಿ ಇಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ 4ನೇ ರ್ಯಾಂಕ್ ಪಡೆದಿದ್ದಾನೆ. ಬಿ-ಫಾರ್ಮಾ ಹಾಗೂ ಡಿ-ಫಾರ್ಮಾದಲ್ಲಿ ರಾಜ್ಯಕ್ಕೆ 25ನೇ ರ್ಯಾಂಕ್ ಪಡೆದಿದ್ದಾರೆ. ಮಂಗಳೂರಿನಲ್ಲಿ ಎಕ್ಸ್‍ಫರ್ಟ್ ಕಾಲೇಜಿನಲ್ಲಿ ಪಿ.ಯು. ವಿದ್ಯಾಭ್ಯಾಸ ಮಾಡಿದ ಶಶಾಂಕ್ ಸಿಇಟಿ ಪರೀಕ್ಷೆಯಲ್ಲಿ 180ಕ್ಕೆ 170 ಅಂಕಗಳನ್ನು ಗಳಿಸಿದ್ದಾನೆ. (P-55/60, ಅ-56/60, ಒ-59/60). ಭವಿಷ್ಯದಲ್ಲಿ ಇಂಜಿನಿಯರಿಂಗ್ ಮಾಡಲು ಆಶಿಸಿದ್ದು, ಈ ಕುರಿತು ರಾಷ್ಟ್ರೀಯ ಪರೀಕ್ಷೆಗಳಾದ ಎಇಇ, IIಖಿ ಕೂಡ ಬರೆಯುವುದಾಗಿ ‘ಶಕ್ತಿ’ಗೆ ತಿಳಿಸಿದ್ದಾನೆ.ಮಡಿಕೇರಿಯ ವಕೀಲ ಪಾಸುರ ಪ್ರೀತಮ್ - ಹೇಮಾ ದಂಪತಿಯ ಪುತ್ರ ಆರ್ನವ್ ಅಯ್ಯಪ್ಪ ಸಿಇಟಿಯ ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್‍ನಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದಿದ್ದಾನೆ. ಕೃಷಿ ಬಿಎಸ್ಸಿ ವಿಭಾಗದಲ್ಲಿ 4ನೇ ರ್ಯಾಂಕ್, ವೆಟರ್‍ನರಿಯಲ್ಲಿ 5 ನೇ ರ್ಯಾಂಕ್ ಹಾಗೂ ಇಂಜಿನಿಯರಿಂಗ್ ವಿಭಾಗದಲ್ಲಿ 81ನೇ ರ್ಯಾಂಕ್ ಪಡೆದಿದ್ದಾನೆ. ಒಟ್ಟು 240ಕ್ಕೆ 215 ಅಂಕಗಳನ್ನು ಪಡೆದಿದ್ದಾನೆ. (P-54/60, ಅ-60/60, ಒ-41/60, ಃ-60/60). ಭವಿಷ್ಯದಲ್ಲಿ ವೈದ್ಯಕೀಯ ವಿಜ್ಞಾನ ಓದುವ ಆಸೆಯಿದ್ದು, ಈ ಸಂಬಂಧ ಓಇಇಖಿ ಪರೀಕ್ಷೆ ಬರೆಯಲು ಸಿದ್ಧನಾಗುತ್ತಿರುವುದಾಗಿ ತಿಳಿಸಿದ್ದಾನೆ. ಮೂಡಬಿದ್ರೆ ಆಳ್ವಾಸ್‍ನಲ್ಲಿ ಪಿ.ಯು. ವ್ಯಾಸಂಗ ಮುಗಿಸಿದ್ದಾನೆ. ಸಿಇಟಿ ಪರೀಕ್ಷೆ ರಾಜ್ಯಮಟ್ಟದ ಪರೀಕ್ಷೆಯಾದ ಕಾರಣ ಜಿಲ್ಲಾ ಕಾಲೇಜುಗಳ ವಿದ್ಯಾರ್ಥಿಗಳ ಅಂಕಗಳು ಶಿಕ್ಷಣ ಇಲಾಖೆಗೆ ಲಭ್ಯವಾಗಿಲ್ಲ ಎಂದು ಪ.ಪೂ. ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಹಾಲಿಂಗಯ್ಯ ತಿಳಿಸಿದ್ದಾರೆ.