ಶನಿವಾರಸಂತೆ: ಶನಿವಾರಸಂತೆಯ ನಿವೃತ್ತ ಸೈನಿಕರ ಸಂಘದ ಕಟ್ಟಡದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಎಂ.ಎನ್. ಧರ್ಮಪ್ಪ ಧ್ವಜಾರೋಹಣ ನೆರವೇರಿಸಿ ಸರಳ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಮ್ಮ ದೇಶದ ಸೈನ್ಯ ಬಲವು ಸ್ವಾತಂತ್ರ್ಯ ನಂತರ ಹೆಚ್ಚಾಗಿದ್ದು, ನಮ್ಮ ರಕ್ಷಣಾ ಕ್ಷೇತ್ರವು ಅಭಿವೃದ್ಧಿಯ ಪಥದಲ್ಲಿದೆ ಎಂದು ಹೇಳಿದರು. ಸಂಘದ ಗೌರವ ಅಧ್ಯಕ್ಷ ಎ.ಎಸ್. ಮಹೇಶ್ ಹಾಗೂ ಕಾರ್ಯದರ್ಶಿ ಎಸ್.ಎನ್. ಪಾಂಡು ಅವರುಗಳು ಮಾತನಾಡಿ, ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ವ್ಯಕ್ತಿಗಳನ್ನು ನಾವು ಇಂದು ಸ್ಮರಿಸಬೇಕು ಎಂದರು. ಸಮಾರಂಭದಲ್ಲಿ ನಿರ್ದೇಶಕರುಗಳಾದ ಕೆ.ಡಿ. ಚಂದ್ರಪ್ಪ, ಕೆ.ಪಿ. ತಿಮ್ಮಯ್ಯ, ಬಿ.ಆರ್. ಆನಂದ್, ಎ.ಕೆ. ಗಿರಿ, ಪಿ.ಎನ್. ಗಂಗಾಧರ್, ಕೆ.ಎಂ. ಪುಟ್ಟಸ್ವಾಮಿ, ಟಿ.ಎಸ್. ನಾಗ ಎಲ್ಲರು ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡಿದ್ದರು. ಕಾರ್ಯದರ್ಶಿ ಎಸ್.ಎನ್. ಪಾಂಡು ಸ್ವಾಗತಿಸಿ, ವಂದಿಸಿದರು.

ಸಿದ್ದಾಪುರ: ಸಿದ್ದಾಪುರದ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ವತಿಯಿಂದ ಸಿದ್ದಾಪುರ ಹಾಗೂ ನೆಲ್ಲಿಹುದಿಕೇರಿ ಪಟ್ಟಣದ ಆಟೋ ನಿಲ್ದಾಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಸಿದ್ದಾಪುರದಲ್ಲಿ ಸಿದ್ದಾಪುರ ಠಾಣೆಯ ಸಹಾಯಕ ಠಾಣಾಧಿಕಾರಿ ಗಣಪತಿ ಧ್ವಜಾರೋಹಣ ನೆರವೇರಿಸಿದರು. ನೆಲ್ಲಿಹುದಿಕೇರಿಯಲ್ಲಿ ಸಹಾಯಕ ಠಾಣಾಧಿಕಾರಿ ವಿನೋದ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಆಟೋ ಚಾಲಕರ ಮಾಲೀಕರ ಸಂಘದ ಅಧ್ಯಕ್ಷ ಎಂ.ಆರ್. ಸಲೀಂ ಹಾಗೂ ಪದಾಧಿಕಾರಿಗಳು ಹಾಜರಿದ್ದರು.

ಗೋಣಿಕೊಪ್ಪಲು: ಇಲ್ಲಿನ ಕಾವೇರಿ ಕಾಲೇಜಿನಲ್ಲಿ 74ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ.ವಿ. ಕುಸುಮಾಧರ್ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭ ಕಾವೇರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎಸ್.ಎಸ್. ಮಾದಯ್ಯ, ಹಿರಿಯ ಉಪನ್ಯಾಸಕ ಕ್ಯಾಪ್ಟನ್ ಬ್ರೈಟಕುಮಾರ್, ಎನ್‍ಎಸ್‍ಎಸ್ ಅಧಿಕಾರಿಗಳಾದ ಎಂ.ಎನ್. ವನಿತ್‍ಕುಮಾರ್, ಎನ್.ಪಿ. ರೀತಾ, ಎನ್‍ಸಿಸಿ ಅಧಿಕಾರಿ ಕ್ಯಾಪ್ಟನ್ ಎಂ.ಆರ್. ಅಕ್ರಂ, ಕಚೇರಿ ಅಧೀಕ್ಷಕ ಸೋಮನಾಥ್, ಹಾಸ್ಟೆಲ್ ವ್ಯವಸ್ಥಾಪಕ ಮಿನ್ನಂಡ ಜೋಯಪ್ಪ, ಎನ್‍ಸಿಸಿ, ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು. ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕಾಲೇಜಿನ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.

ಕಾವೇರಿ ವಾಹನ ಚಾಲಕರ-ಮಾಲೀಕರ ಸಂಘ: ಮಡಿಕೇರಿಯ ಕಾವೇರಿ ವಾಹನ ಚಾಲಕರ ಮತ್ತು ಮಾಲೀಕರ ಸಂಘದಿಂದ 74ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಸಂಘದ ಅಧ್ಯಕ್ಷ ಜೈಜಗದೀಶ್ ಧ್ವಜಾರೋಹಣ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಕೊಡಗು ಜಿಲ್ಲಾಧ್ಯಕ್ಷ ತೆನ್ನೀರಾ ಮೈನಾ, ಹಿರಿಯರ ತ್ಯಾಗ-ಬಲಿದಾನ, ಹೋರಾಟದ ಮೂಲಕ ಗಳಿಸಿದ ಸ್ವಾತಂತ್ರ್ಯವನ್ನು ಉಳಿಸುವ ನಿಟ್ಟಿನಲ್ಲಿ ಮುಂದಿನ ಪೀಳಿಗೆಗೆ ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನದ ಆಶಯಗಳಿಗೆ ಪೂರಕವಾಗಿ ಜೀವನ ಕ್ರಮ ಅಳವಡಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ ಕುಯ್ಯಮುಡಿ ರಾಜೇಶ್, ಸತೀಶ್ ಬಿ.ಜೆ., ಶ್ಯಾಂ ಸುಬ್ಬಯ್ಯ , ಲೋಕೇಶ್ ಶೆಟ್ಟಿ, ಸಿದ್ದು, ಜಪ್ಪು, ಕುಮಾರ್ ಪಿ.ಪಿ., ಸುಂದರ್, ವೀರು, ಸಂತೋಷ್, ರಷೀದ್, ಮುಸ್ತಫ, ಫಾರುಕ್, ಹರ್ಷ, ಗೌತಮ್ ಸೇರಿದಂತೆ ಸದಸ್ಯರು ಭಾಗಿಯಾಗಿದ್ದರು.ಅಮ್ಮತ್ತಿ: ಅನುಗ್ರಹ ಸ್ವಸಹಾಯ ಸಂಘ ಅಮ್ಮತ್ತಿ ಇವರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕ್ಯಾರಂ ಸ್ಪರ್ಧೆಯನ್ನು ಆಯೋಜಿಸಲಾಯಿತು. ಸ್ಪರ್ಧೆಯಲ್ಲಿ ಎಂ.ಹೆಚ್. ಶಫೀಕ್ - ಮುಹಮ್ಮದ್ ಪಿ.ಹೆಚ್. ತಂಡ ಪ್ರಥಮ ಸ್ಥಾನ ಹಾಗೂ ಸಿ.ಕೆ. ಸಿದ್ದೀಕ್ - ಕೆ.ಎಂ. ನಾಸಿರ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎ.ಸಿ. ಸಕಿರ್ ವಹಿಸಿಕೊಂಡರು. ಮುಖ್ಯ ಅತಿಥಿಗಳಾದ ಮಾಜಿ ಅಧ್ಯಕ್ಷ ಕೆ.ಎಂ. ಹಂಝ ಅಧ್ಯಕ್ಷ, ಉಪಾಧ್ಯಕ್ಷ ಎಂ.ಎಂ. ಬಷೀರ್ ಹಾಗೂ ಸದಸ್ಯ ಕೆ.ಎಂ. ಸೈನುದ್ದಿನ್ ಬಹುಮಾನ ವಿತರಣೆ ಮಾಡಿದರು.

ಸಿದ್ದಾಪುರ: ನೆಲ್ಲಿಹುದಿಕೇರಿ ಗ್ರಾ.ಪಂ. ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಹೆಚ್.ಎಸ್. ಅನಿಲ್‍ಕುಮಾರ್ ನೆರವೇರಿಸಿದರು. ಈ ಸಂದರ್ಭ ಗ್ರಾ.ಪಂ. ಸಿಬ್ಬಂದಿಗಳು ಹಾಜರಿದ್ದರು.

ಶನಿವಾರಸಂತೆ: ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುತ್ತಿರುವ ನಡುವೆ ಶನಿವಾರಸಂತೆ ವ್ಯಾಪ್ತಿಯಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಶನಿವಾರಸಂತೆ ಪತ್ರಿಕಾ ಭವನದಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಸರಳ ಸಮಾರಂಭದಲ್ಲಿ ಭಾಗವಹಿಸಿದ್ದ ವರ್ತಕರ ಸಂಘದ ಅಧ್ಯಕ್ಷ ಸರ್ದಾರ್ ಅಹಮ್ಮದ್ ಮಾತನಾಡಿ, ಸ್ವತಂತ್ರಕ್ಕಾಗಿ ಹೋರಾಟ, ಬಲಿದಾನ ಮಾಡಿದ ಸ್ವತಂತ್ರ ಹೋರಾಟಗಾರರ ಫಲದಿಂದ ನಾವೆಲ್ಲರು ಸ್ವತಂತ್ರರಾಗಿದ್ದೇವೆ. ಈ ನಿಟ್ಟಿನಲ್ಲಿ ನಮ್ಮೆಲ್ಲರ ಸ್ವತಂತ್ರಕ್ಕಾಗಿ ಹೋರಾಡಿದ ಹಿರಿಯರನ್ನು ಕೇವಲ ಸ್ವಾತಂತ್ರ್ಯ ದಿನದಂದು ನೆನಪಿಸಿಕೊಳ್ಳದೆ ಪ್ರತಿದಿನವೂ ನೆನಪಿಸಿಕೊಳ್ಳಬೇಕಾಗಿದೆ ಎಂದರು. ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ತರಬೇತುದಾರ ಬಿ.ಬಿ. ಶಿವಣ್ಣ, ಪತ್ರಿಕಾ ಭವನದ ಅಧ್ಯಕ್ಷ ಹೆಚ್.ಆರ್. ಹರೀಶ್‍ಕುಮಾರ್, ಪತ್ರಕರ್ತ ಭಾಸ್ಕರ್ ಮುಳ್ಳೂರು, ಪ್ರಮುಖರಾದ ವೇಧಕುಮಾರ್, ಮಧು, ಹೇಮಾವತಿ, ದಿನೇಶ್ ಮಾಲಂಬಿ ಮುಂತಾದವರು ಹಾಜರಿದ್ದರು.

ಪೆರಾಜೆ ಸಹಕಾರ ಸಂಘ: ಪೆರಾಜೆ ಸಹಕಾರ ಕೃಷಿ ಪತ್ತಿನ ಸಂಘದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಸಹಕಾರ ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ನೆರವೇರಿಸಿದರು. ಈ ಸಂದರ್ಭ ಉಪಾಧ್ಯಕ್ಷ ಮೋನಪ್ಪ ನಿಡ್ಯಮಲೆ ಸಂಘದ ನಿರ್ದೇಶಕರಾದ ಅಶೋಕ ಪೆರುಮುಂಡ, ಗಾಂಧಿ ಪ್ರಸಾದ್ ಬಂಗಾರಕೋಡಿ, ಪ್ರಸನ್ನ ನೆಕ್ಕಿಲ, ಜಯರಾಮ್ ಪಿ.ಟಿ. ಶೇಷಪ್ಪ ನಾಯ್ಕ್, ಪ್ರಮೀಳಾ ಭಾರದ್ವಾಜ್ ಬಂಗಾರಕೋಡಿ, ರೇಣುಕಾ ಕುಂದಲ್ಪಾಡಿ, ಉದಯಕುಮಾರ್ ಪೆರಾಜೆ, ದಾಸಪ್ಪ ಮಡಿವಾಳ, ಕಿರಣ್ ಬಂಗಾರಕೋಡಿ ಹಾಗೂ ಬ್ಯಾಂಕ್‍ನ ಪ್ರಭಾರ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಲೋಕೇಶ್ ಹೊದ್ದೆಟ್ಟಿ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.ಶನಿವಾರಸಂತೆ ಈದ್ಗಾ ಮಸೀದಿ: ಶನಿವಾರಸಂತೆಯ ಈದ್ಗಾ ಮಸೀದಿಯಲ್ಲಿ ಜಮಾಅತ್‍ನ ಹಿರಿಯ ಸದಸ್ಯ ಮಹಮ್ಮದ್ ಹುಸೇನ್ ಧ್ವಜಾರೋಹಣ ನೆರವೇರಿಸಿದರು.

ಈದ್ಗಾ ಮಸೀದಿಯ ಗುರುಗಳಾದ ಅಬ್ದುಲ್ ಮೌಮೀನ್ ಮಾತನಾಡಿ, 74ನೇ ಸ್ವಾತಂತ್ರ್ಯೋತ್ಸವ ನಮ್ಮ ಹಿರಿಯರ ತ್ಯಾಗ, ಬಲಿದಾನದಿಂದಾಗಿ ಲಿಬಿಸಿದ್ದು, ಇದನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು. ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಎ. ಆದಿಲ್ ಪಾಷ ಮಾತನಾಡಿ, ಈ ದೇಶದ ಬೆನ್ನೆಲುಬು ಅನ್ನದಾತ ರೈತರು ಮತ್ತು ದೇಶವನ್ನು ಕಾಯುವ ಸೈನಿಕರು ಈ ದೇಶದ ಆಸ್ತಿಯಾಗಿದ್ದು, ಅವರನ್ನು ಗೌರವಿಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭ ಜಮಾಅತ್‍ನ ಕಾರ್ಯದರ್ಶಿ ಅಬ್ದುಲ್ ರಜಾಕ್, ಸದಸ್ಯರಾದ ಅಬ್ದುಲ್ ಶುಕೂರ್, ಜಹೂರ್, ದಸ್ತಗೀರ್, ಸನಾರಿಯಾಜ್, ಕದೀರ್, ಸಲೀಮ್, ನಜೀರ್, ಜಬ್ಬಾರ್ ಸಾಬ್, ಜಮೀರ್ ಅಹಮದ್, ಮೂಸಾ ಹಾಜರಿದ್ದರು.

ಬಿಳಿಗೇರಿ: ಬಿಳಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿಮೊಟ್ಟೆಯಲ್ಲಿ ಗ್ರಾಮಸ್ಥರು ಒಗ್ಗೂಡಿ ಸ್ವಾತಂತ್ರ್ಯ ದಿನವನ್ನು ಆಚರಿಸಿದರು. ಧ್ವಜಾರೋಹಣವನ್ನು ಮಾಜಿ ಸೈನಿಕ ಗಣೇಶ್ ಅವರ ನೇತೃತ್ವದಲ್ಲಿ ಮಾಜಿ ಯೋಧ ಚಿನ್ನಪ್ಪ ನೆರವೇರಿಸಿದರು. ಈ ಸಂದರ್ಭ ಮೂಸ, ರಮೇಶ್, ಹಂಸ, ಪಂಚಾಯಿತಿ ಸದಸ್ಯ ಗಿರೀಶ್, ರಾಜಣ್ಣ, ಗಣೇಶ್, ಅಲೆಕ್ಸ್, ಸೀನ್ಟೂ, ಆಟೋ ರಾಜ, ದಿನೇಶ್, ಸುಹೈಲ್, ಅಪ್ಸಲ್, ರಿಸಾಂತ್, ಆರೀಫ್ ನಂದಿಮೊಟ್ಟೆ ಮತ್ತು ಮಕ್ಕಳು ಸೇರಿದಂತೆ ಗ್ರಾಮದ ಹಲವಾರು ಜನ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಮೂಸ ಪಾಯಸ ವಿತರಿಸಿ ಶುಭ ಹಾರೈಸಿದರು.

ಲಯನ್ಸ್ ಕ್ಲಬ್ ವೀರಾಜಪೇಟೆ: ಲಯನ್ಸ್ ಕ್ಲಬ್ ವೀರಾಜಪೇಟೆ ಹಾಗೂ ಸಾರ್ವಜನಿಕ ಆಸ್ಪತ್ರೆ, ವೀರಾಜಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಸ್ಪತ್ರೆಯ ಆವರಣದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಆಚರಿಸಲಾಯಿತು.

ಧ್ವಜಾರೋಹಣ ಮಾಡಿ ಮಾತನಾಡಿದ ವೈದ್ಯಾಧಿಕಾರಿ ಡಾ. ವಿಶ್ವನಾಥ್ ಸಿಂಪಿ, ಆರೋಗ್ಯವಂತ ಪ್ರಜೆಯಾಗಿ ಸ್ವಸ್ಥ ಸಮಾಜದಲ್ಲಿ ಬಾಳುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಸನ್ನ ಎ.ಪಿ., ಪದಾಧಿಕಾರಿಗಳು, ಆಸ್ಪತ್ರೆಯ ಸಿಬ್ಬಂದಿ ಭಾಗವಹಿಸಿದ್ದರು.

ಟಿ. ಶೆಟ್ಟಿಗೇರಿ: ಟಿ. ಶೆಟ್ಟಿಗೇರಿಯಲ್ಲಿ ಮಾಜಿ ಸೈನಿಕರ ಸಂಘದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಸಂಘದ ಅಧ್ಯಕ್ಷ ಕಟ್ಟೇರ ವಿಶ್ವನಾಥ್, ಕಾರ್ಯದರ್ಶಿ ಎ.ಎಸ್. ಗಣಪತಿ, ಖಜಾಂಚಿ ಸಿ.ಎಂ. ಸತೀಶ್, ಉಪಾಧ್ಯಕ್ಷ ಮನ್ನೇರ ರಮೇಶ್, ಸಹ ಕಾರ್ಯದರ್ಶಿ ಅಪ್ಪಚಂಗಡ ಮೋಟಯ್ಯ ಹಾಗೂ ಸದಸ್ಯರು ಹಾಜರಿದ್ದರು.ಭಾರತಿ ವಿದ್ಯಾಸಂಸ್ಥೆ: ಶನಿವಾರಸಂತೆ ಭಾರತಿ ವಿದ್ಯಾಸಂಸ್ಥೆಯಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಲಯನ್ಸ್ ಕ್ಲಬ್ ಹಾಗೂ ಭಾರತಿ ವಿದ್ಯಾಸಂಸ್ಥೆ ವತಿಯಿಂದ ಧ್ವಜಾರೋಹಣ ಮಾಡಲಾಯಿತು.

ಧ್ವಜಾರೋಹಣ ನಂತರ ಲಯನ್ಸ್ ಕ್ಲಬ್ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಭಾರತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಲಯನ್ ಎನ್.ಬಿ. ನಾಗಪ್ಪ ವಹಿಸಿ ಮಾತನಾಡಿ, ವಿದ್ಯಾಸಂಸ್ಥೆಯಲ್ಲಿ ಮಕ್ಕಳ ಹಾಜರಾತಿ ಇಲ್ಲದೆ ಸ್ವಾತಂತ್ರ್ಯೋತ್ಸವ ಸಮಾರಂಭಕ್ಕೆ ಸಂಭ್ರಮವಿಲ್ಲ, ಮುಂದಿನ ವರ್ಷವಾದರು ಸಂಭ್ರಮದ ಆಚರಣೆ ಭಾಗ್ಯ ದೊರೆಯಲಿ ಎಂದರು. ಕಾಲೇಜಿನ ಉಪನ್ಯಾಸಕರಾದ ಚಂದ್ರಕಾಂತ್, ಹರೀಶ್ ಹಾಗೂ ಸಹ ಶಿಕ್ಷಕ ಗೋಪಾಲ್ ಅವರುಗಳು ದಿನದ ಮಹತ್ವದ ಬಗ್ಗೆ ಮಾತನಾಡಿದರು. ಸಭೆಯಲ್ಲಿ ಶನಿವಾರಸಂತೆ ಲಯನ್ಸ್ ಕ್ಲಬ್ ಅಧ್ಯಕ್ಷ ಬಿ.ಸಿ. ಧರ್ಮಪ್ಪ, ಲಯನ್ಸ್ ಪದಾಧಿಕಾರಿಗಳು, ಸದಸ್ಯರು ಹಾಗೂ ವಿದ್ಯಾಸಂಸ್ಥೆಯ ನಿರ್ದೇಶಕರು, ಕಾಲೇಜಿನ ಉಪನ್ಯಾಸಕರು, ಶಿಕ್ಷಕರು ಉಪಸ್ಥಿತರಿದ್ದು, ಪ್ರೌಢಶಾಲಾ ಮುಖ್ಯ ಶಿಕ್ಷಕ ನರಸಿಂಹಯ್ಯ ಸ್ವಾಗತಿಸಿ, ವಂದಿಸಿದರು.

ವೀರಾಜಪೇಟೆ ಮಹಿಳಾ ಸಮಾಜ: ವೀರಾಜಪೇಟೆಯಲ್ಲಿರುವ ಕೊಡಗು ಜಿಲ್ಲಾ ಮಹಿಳಾ ಸಹಕಾರ ಸಮಾಜದಿಂದ 74ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಮಹಿಳಾ ಸಮಾಜದ ಅಧ್ಯಕ್ಷೆ ಪಿ.ಬಿ. ಗೀತಾ ಧ್ವಜಾರೋಹಣ ನೆರವೇರಿಸಿ ದಿನದ ಮಹತ್ವದ ಕುರಿತು ಮಾತನಾಡಿದರು. ಈ ಸಂದರ್ಭ ಸಂಘದ ನಿರ್ದೇಶಕರು, ಸಿಬ್ಬಂದಿಗಳು ಹಾಜರಿದ್ದರು.

ಸುಂಟಿಕೊಪ್ಪ: ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷ ವೈ.ಎಂ. ಕರುಂಬಯ್ಯ ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಆನೇಕ ಮಹಾನ್ ವ್ಯಕ್ತಿಗಳು ಜೀವ ಬಲಿದಾನ ಗೈದಿದ್ದಾರೆ. ಇಂದಿನ ದಿನ ಅವರನ್ನು ಸ್ಮರಿಸುವುದು ಅಗತ್ಯವಾಗಿದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಪಿ.ಎಸ್. ಜಾನ್ ವಹಿಸಿ ಮಾತನಾಡಿ, ಕೋವಿಡ್-19 ರ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶವು ಸರಳ ರೀತಿಯಲ್ಲಿ ಸ್ವಾತಂತ್ರ್ಯವನ್ನು ಆಚರಿಸುತ್ತಿದ್ದು ಕೊರೊನಾ ತೊಲಗಿಸಿ, ಸ್ವಾತಂತ್ರ್ಯ ಲಭಿಸಲಿ, ದೇಶವು ಅಭಿವೃದ್ಧಿಯತ್ತ ಸಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭ ಕಾಲೇಜು ಉಪನ್ಯಾಸಕ ಹಾಗೂ ಉಪನ್ಯಾಸಕಿಯರು ಇದ್ದರು.

ಬಾಳೆಲೆ ಉಪ ಪೊಲೀಸ್ ಠಾಣೆ: ಬಾಳೆಲೆ ಪೆÇಲೀಸ್ ಉಪ ಠಾಣೆಯಲ್ಲಿ ಸ್ವಾತಂತ್ರ್ಯ ದಿನದ ಅಂಗವಾಗಿ ಗ್ರಾಮದ ಮಾಚಂಗಡ ಕರ್ನಲ್ ಕಟ್ಟಿ ಕರುಂಬಯ್ಯ ಅವರಿಂದ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ, ಬಾಳೆಲೆಯ ಕುಪ್ಪಸ್ವಾಮಿ ಮತ್ತು ಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಎಎಸ್‍ಐ ವೆಂಕಟೇಶ್ ಹಾಗೂ ಸಿಬ್ಬಂದಿಗಳಾದ ಜೀವನ್ ಮತ್ತು ಬೀಮಜ್ಜ ಅವರು ನಡೆಸಿಕೊಟ್ಟು ಎಲ್ಲರಿಗೂ ಸಿಹಿ ತಿಂಡಿಯನ್ನು ಹಂಚಿದರು.ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆ ಸುಂಟಿಕೊಪ್ಪ: ಸುಂಟಿಕೊಪ್ಪದ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಾಜಿ ಯೋಧ ವಿಲಿಯಂ ಮೇನೆಜೇಸ್ ಧ್ವಜಾರೋಹಣ ನೇರವೇರಿಸಿ, ದಿನದ ಮಹತ್ವದ ಕುರಿತು ಮಾತನಾಡಿದರು. ಗ್ರಾ.ಪಂ. ಮಾಜಿ ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್, ಶಾಲಾ ವ್ಯವಸ್ಥಾಪಕರುಗಳಾದ ಫಾದರ್ ಅರುಳ್ ಸೆಲ್ವಕುಮಾರ್, ಸಹಾಯಕ ಧರ್ಮಗುರುಗಳಾದ ಮದಲೈಮುತ್ತು, ಶಾಲಾ ಮುಖ್ಯೋಪಾಧ್ಯಾಯ ಸೆಲ್ವರಾಜ್ ಶಾಲಾ ಶಿಕ್ಷಕರು ಇದ್ದರು.

ಸುಂಟಿಕೊಪ್ಪ ಗ್ರಾಮ ಪಂಚಾಯಿತಿ: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಮೀನುಗಾರಿಕ ಉಪನಿರ್ದೇಶಕಿ ಕೆ.ಟಿ. ದರ್ಶನ್ ಹಾಗೂ ಪಂಚಾಯಿತಿ ಅಭಿವೃದ್ಧಿ ವೇಣುಗೋಪಾಲ್ ಧ್ವಜಾರೋಹಣ ನೇರವೇರಿಸಿದರು. ಈ ಸಂದರ್ಭದಲ್ಲಿ ಪಂಚಾಯಿತಿ ಸಿಬ್ಬಂದಿಗಳಾದ ಮಾಜಿ ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್, ಮಾಜಿ ಸದಸ್ಯ ಎ. ಶ್ರೀಧರ್‍ಕುಮಾರ್, ಪುನೀತ್, ಮಂಜುನಾಥ್, ಶ್ರೀನಿವಾಸ್, ಸಂಧ್ಯಾ ಹಾಗೂ ಪೌರಕಾರ್ಮಿಕರು ಇದ್ದರು.

ಕಾರುಗುಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ: ಕಾರುಗುಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 74ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.

ಕುಶಾಲನಗರ: 74ನೇ ಸ್ವಾತಂತ್ರ್ಯದಿನಾಚರಣೆಯ ಅಂಗವಾಗಿ ಕುಶಾಲನಗರ ಜಾಮೀಯ ಮಸೀದಿ ಸಮಿತಿಯ ಕಾರ್ಯದರ್ಶಿ ತನ್ವೀರ್ ಅಹಮ್ಮದ್ ಧ್ವಜಾರೋಹಣ ಮಾಡಿದರು. ಸಮಿತಿಯ ಅಧ್ಯಕ್ಷ ಅಲೀಂ ಮತ್ತು ಪದಾಧಿಕಾರಿಗಳು ಹಾಜರಿದ್ದರು.