ವೀರಾಜಪೇಟೆ, ಆ. 21: ವೀರಾಜಪೇಟೆಯ ಪಂಜರ್‍ಪೇಟೆ ಬಳಿಯ ಸುಭಾಷ್‍ನಗರದಲ್ಲಿ ಹೊಸದಾಗಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆಯನ್ನು ಪಟ್ಟಣ ಪಂಚಾಯಿತಿ ಸದಸ್ಯರುಗಳು ಉದ್ಘಾಟಿಸಿದರು.
ವೀರಾಜಪೇಟೆ ಪಟ್ಟಣ ಪಂಚಾಯಿತಿಯ 9 ಹಾಗೂ 10ನೇ ಬ್ಲಾಕ್‍ಗಳಲ್ಲಿ ರೂ. 35 ಲಕ್ಷ ವೆಚ್ಚದಲ್ಲಿ ಈ ರಸ್ತೆ ನಿರ್ಮಿಸಲಾಗಿತ್ತು. ಕಾಂಕ್ರೀಟ್ ರಸ್ತೆ ಉದ್ಘಾಟನೆ ಸಂದರ್ಭದಲ್ಲಿ ಮಾಜಿ ಅಧ್ಯಕ್ಷೆ ಎಂ.ಕೆ. ದೇಚಮ್ಮ ಸದಸ್ಯರಾದ ಅನಿತಾ, ಮಹಮ್ಮದ್ ರಾಫಿ, ಎಸ್.ಹೆಚ್. ಮತೀನ್, ಅಭಿಯಂತರ ಎಂ.ಪಿ. ಹೇಮ್‍ಕುಮಾರ್ ಹಾಗೂ ಗುತ್ತಿಗೆದಾರರಾದ ವಿನ್ಸೆಂಟ್ ಹಾಜರಿದ್ದರು.