ಶನಿವಾರಸಂತೆ, ಆ. 21: ಸಮೀಪದ ಕೊಡ್ಲಿಪೇಟೆ ಹೇಮಾವತಿ ರೋಟರಿ ಸಂಸ್ಥೆಯ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ ಪ್ಲಾಂಟರ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು.
ವಲಯ ನಿಕಟಪೂರ್ವ ರೋಟರಿ ರಾಜ್ಯಪಾಲ ಸದಾನಂದ ಸಮಾರಂಭದಲ್ಲಿ ಅಧಿಕಾರಿಯಾಗಿ ಕಾರ್ಯಕ್ರಮ ನಿರ್ವಹಿಸಿ ಪ್ರತಿಜ್ಞಾ ವಿಧಿ ಬೋಧಿಸಿದರು. ನಿರ್ಗಮಿತ ಅಧ್ಯಕ್ಷ ಎಚ್.ಜೆ. ಪ್ರವೀಣ್ ನೂತನ ಅಧ್ಯಕ್ಷ ಎಚ್.ಎಂ. ದಿವಾಕರ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಮುಖ್ಯ ಅತಿಥಿ ವಲಯ ಉಪ ಗವರ್ನರ್ ರವಿ, ಲೆಫ್ಟಿನೆಂಟ್ ಜೇಕಬ್ ಮಾತನಾಡಿದರು.
ಸದಸ್ಯರಾದ ಎಚ್.ಜೆ. ಪ್ರವೀಣ್, ಯು.ಎಚ್. ಲೋಕೇಶ್, ಡಿ.ಎಸ್. ಯತೀಶ್, ಭಾನುಪ್ರಕಾಶ್, ಮಾಧವಲಾಲ್ ರೋಟರಿಗೆ ದೇಣಿಗೆ ನೀಡಿದ್ದು, ಅವರಿಗೆ ಪಿ.ಎಚ್.ಎಫ್. ದೃಢೀಕರಣ ಪತ್ರ ನೀಡಿ ಗೌರವಿಸಲಾಯಿತು. ಎಚ್.ಜೆ. ಪ್ರವೀಣ್ ಅವರನ್ನು ಜಿಲ್ಲಾ ಉಪ ಚೇರ್‍ಮ್ಯಾನ್ ಆಗಿ ನೇಮಕ ಮಾಡಲಾಯಿತು. ನೂತನ ಕಾರ್ಯದರ್ಶಿ ಅಮೃತ್ ಕುಮಾರ್, ಸದಸ್ಯರಾದ ಮನುಕುಮಾರ್, ರಮೇಶ್, ಮೋಹನ್ ಕುಮಾರ್, ಸಿದ್ಧೇಶ್ ಉಪಸ್ಥಿತರಿದ್ದರು.