ಮಡಿಕೇರಿ, ಆ. 20: ತಲಕಾವೇರಿಯಲ್ಲಿ ತಾ. 6 ರಂದು ಭೂಸಮಾಧಿಯೊಂದಿಗೆ ಕಣ್ಮರೆಯಾಗಿರುವ ಅರ್ಚಕ ಕುಟುಂಬದ ಶಾಂತ ಆಚಾರ್ ಹಾಗೂ ಶ್ರೀನಿವಾಸ್ ಪಡಿಲಾಯ ಅವರುಗಳ ಸುಳಿವಿಗಾಗಿ 15ನೇ ದಿನವೂ ಶೋಧ ಕಾರ್ಯ ನಡೆಸಲಾಯಿತು.(ಮೊದಲ ಪುಟದಿಂದ) ಎನ್‍ಡಿಆರ್‍ಎಫ್, ಅರಣ್ಯ ಇಲಾಖೆ, ಕೊಡಗು ಪೊಲೀಸರು ಜಂಟಿ ಕಾರ್ಯಾಚರಣೆ ಕೈಗೊಂಡರಾದರೂ, ಈ ತಂಡಕ್ಕೆ ಯಾವದೇ ಸುಳಿವು ತಪಾಸಣೆ ವೇಳೆ ದೊರಕಿಲ್ಲ ಎಂದು ಮಡಿಕೇರಿ ಪೊಲೀಸ್ ಉಪ ವಿಭಾಗದ ಡಿವೈಎಸ್‍ಪಿ ಬಿ.ಪಿ. ದಿನೇಶ್‍ಕುಮಾರ್ ಮಾಹಿತಿ ನೀಡಿದ್ದಾರೆ. ಕಾರ್ಯಾಚರಣೆಯನ್ನು ಇಂದಿನಿಂದ (ತಾ.21) ಮುಂದು ವರೆಸುವ ಬಗ್ಗೆ ಜಿಲ್ಲಾಧಿಕಾರಿಗಳು ಸರಕಾರದೊಂದಿಗೆ ಸಲಹೆ ಪಡೆದ ಬಳಿಕ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.