ಆಗಸ್ಟ್ 6 ರಂದು ಸಂಭವಿಸಿರುವ ತಲಕಾವೇರಿ ದುರ್ಘಟನೆಯ ಮರುಕ್ಷಣದಿಂದ ಇಂದಿನ ತನಕ 15 ದಿವಸ ಎನ್‍ಡಿಆರ್‍ಎಫ್ ಹಾಗೂ ವಿವಿಧ ಇಲಾಖೆಗಳು ಪೊಲೀಸರ ಸಹಕಾರದಿಂದ ಜಂಟಿ ಕಾರ್ಯಾಚರಣೆ ನಡೆಸಿದೆ. ಈಗಾಗಲೇ ಭೂಸಮಾಧಿಯಾಗಿದ್ದ ಮೂವರ ಶವಗಳನ್ನು ಪತ್ತೆಹಚ್ಚಿ ಹೊರ ತೆಗೆಯಲಾಗಿದೆ. ಇನ್ನಿಬ್ಬರ ಪತ್ತೆಗಾಗಿ ಪ್ರಾಮಾಣಿಕ ಪ್ರಯತ್ನದೊಂದಿಗೆ ಸಾಧ್ಯವಿರುವ ಎಲ್ಲಾ ದಿಸೆಯಲ್ಲಿ ಹುಡುಕಾಟ ನಡೆಸಲಾಗಿದೆ. ಹೀಗಾಗಿ ತಾ. 21 (ಇಂದು) ಇಂದು ಅಂತಿಮ ನಿರ್ಧಾರ (ಮೊದಲ ಪುಟದಿಂದ) ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕರಾಗಿದ್ದ ಟಿ.ಎಸ್. ನಾರಾಯಣಾಚಾರ್ ಅವರ ಕುಟುಂಬ ಹಾಗೂ ಮಕ್ಕಳೊಂದಿಗೆ ಸಮಾಲೋಚಿಸಿ, ಕಾರ್ಯಾಚರಣೆ ಕುರಿತು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇವೆ.

- ಅನೀಸ್ ಕಣ್ಮಣಿ ಜಾಯ್, ಜಿಲ್ಲಾಧಿಕಾರಿ