ಬೋರ ಸರಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ನಿಂತಿದ್ದ. ದಿಢೀರಾಗಿ ಕಾಳ-ಕಾಳಿ ತಮ್ಮ ವಯಸ್ಸಾದ ತಂದೆ, ತಾಯಿಯನ್ನು ಹೊತ್ತು ಆ್ಯಂಬುಲೆನ್ಸ್ನಿಂದ ಕೆಳಗಿಳಿದರು. ಬೋರ ಕೇಳಿದ. ನಿಮ್ಮ ಪೋಷಕರಿಗೆ ಏನಾಯಿತು ಕಾಳ-ಕಾಳಿ? ಕಾಳಿ:“ ಏನ್ ಹೇಳ್ತೀಯ ಬೋರ? ನನ್ನ ಅಮ್ಮ ನನ್ನ ಅಪ್ಪ ಹೋದ ಬಳಿಕ ನನ್ನೊಂದಿಗೇ ಇದ್ದಾರೆ. ನಿನ್ನೆ ರಾತ್ರಿ ನಮ್ಮಮ್ಮನಿಗೆ ಶುಗರ್ ಜಾಸ್ತಿಯಾಯಿತು, ಕಾಳನ ಅಪ್ಪ ಅವರ ಹೆಂಡ್ತಿ ತೀರಿದ ಬಳಿಕ ಸಪ್ಪೆಯಾಗಿದ್ದಾರೆ. ಅವರಿಗೂ ಒಟ್ಟಿಗೇ ಎದೆನೋವು ಕಾಣಿಸಿಕೊಂಡಿತು ಎಂದಳು. ಇಬ್ರನ್ನೂ ನಾನು ನನ್ನ ಪತಿ ಕಾಳನನ್ನು ನೋಡ್ಕೊಂಡಷ್ಟೇ ಚೆನ್ನಾಗೆ ನೋಡ್ಕೊಳ್ತಾ ಇದ್ದೆ; ಆದ್ರೂ ಹೀಗಾಯ್ತು ಎಂದು ನೋವು ತೋಡಿಕೊಂಡಳು. “ತಕ್ಷಣ ಚಿಕಿತ್ಸೆ ಆಗಬೇಕು. ಕೋವಿಡ್ ಆಸ್ಪತ್ರೆಗೆ ಬನ್ನಿ ಬೇಗ” ಎಂದ ಬೋರ. “ಬೇಡಪ್ಪ ಅಮ್ಮನಿಗೆ ಕೋವಿಡ್- ಗೀವಿಡ್ ಏನಿಲ,್ಲ ಶುಗರ್ ಕಡಿಮೆ ಮಾಡಲು ತಕ್ಷಣ ಮಾತ್ರೆ ಅಥ್ವ ಇನ್ಸುಲಿನ್ ಇಂಜೆಕ್ಷನ್ ಕೊಡ್ಬೇಕು. ಮಾವನಿಗೆ ಹಾರ್ಟ್ ಎಟೇಕ್ ಆಗೋ ಭಯ ಇದೆ. ಅವ್ರಿಗೆ ತಕ್ಷಣ “ಲೈಫ್ ಸೇವಿಂಗ್ ಇಂಜೆಕ್ಷನ್” ಅಥ್ವ ಏಸ್ಪಿರಿನ್ ಕೊಟ್ಟು ಉಳ್ಸಿಕೊಳ್ಬೇಕು” ಎಂದು ಕಾಳಿ ತನ್ನಲ್ಲಿನ ವೈದ್ಯಕೀಯ ಜ್ಞಾನವನ್ನು ತೆರೆದಿಟ್ಟಳು. ಆಸ್ಪತ್ರೆಯಲ್ಲಿ ಸದಾ ದುಡಿಯತ್ತಿದ್ದ ಬೋರನಿಗೆ ಆಶ್ಚರ್ಯವೋ ಆಶ್ಚರ್ಯ. ಆತ ಕೇಳಿದ: “ಅಲ್ಲ ಕಾಳಿ ನೀನು ಒಳ್ಳೆ ಹಳ್ಳಿ ಗುಗ್ಗು ಅಂದ್ಕೊಂಡಿದ್ದೆ. ಇಷ್ಟೆಲ್ಲ ವಿಷ್ಯ ಹೇಗ್ ತಿಳ್ಕೊಂಡಿದ್ಯಾ? ಕಾಳಿ: ಅಯ್ಯೋ! ಇದೇನ್ಮಹಾ ಬಿಡು ಬೋರ; ಈಗೆಲ್ಲ ಒಂದ್ನೇ ಕ್ಲಾಸ್ ಮಗೀಗೆನೆ ಇದೆಲ್ಲ ಗೊತ್ತಿರುತ್ತೆ. ಇನ್ ನಂದೇನ್ ಮಹಾ ಬಿಡು.

ಬೋರ: ಆದ್ರೆ ಕಾಳ- ಕಾಳಿ ನೀವು ಇವ್ರಿಬ್ರಿಗೂ ಮೊದ್ಲು ಕೋವಿಡ್ ಟೆಸ್ಟ್ ಮಾಡ್‍ಸ್ ಬೇಕು. ಅದ್ ವರದಿ ಬಂದ್ನಂತ್ರ ಮತ್ತೆ ಬಾಕಿ ವಿಚಾರ ಅಂದ. ಸಿಟ್ಟುಗೊಂಡ ಕಾಳಕಾಳಿ ಆಸ್ಪತ್ರೆ ಒಳ್ಗೆ ನುಗ್ಗೇ ಬಿಟ್ರು, ತಡೀತಾ ಇದ್ದ ಸಿಸ್ಟರ್ನ ತಳ್ಳಿ ಸೀದಾ ಡಾಕ್ಟ್ರ ಮುಂದೆ ನಿಂತ್ರು “ ನೋಡಿ ಸ್ವಾಮಿ ನಮ್ಮ ಈ ಪೋಷಕರಿಗೆ ಬಿಪಿ, ಎದೆ ನೋವಿದ್ರೆ ಆ ಮುಠ್ಠಾಳ ಬೋರ ನಮ್ನ ತಡ್ದು ಕೋವಿಡ್ ಗೀವಿಡ್ ಟೆಸ್ಟ್ ಅಂತವ್ನೆ. ಡಾಕ್ಟ್ರು: ನೀವು ನುಗ್ಗಿ ಬಂದಿದ್ದು ತಪ್ಪು, ಬೋರ ಹೇಳಿದ್ದು ನಿಜಾನೆ. ಹೋಗಿ ಒಳ್ಗೆ ಅವ್ರಿಬ್ರನ್ನ ಬೆಡ್‍ನಲ್ಲಿ ಮಲ್ಗ್ಸಿ, ನೀವು ಹೊರ ಬನ್ನಿ, ನಾವು ನೋಡ್ಕೊಳ್ತೀವಿ”. ಕಾಳ ಕಾಳಿ: ಅರರೆ ಅದ್ ಹೆಂಗಾಗುತ್ತೆ ನಾವಲ್ಲಿ ಇರ್ಲೆ ಬೇಕು ಅವ್ರಿಗೆ ಯಾವ್ ಟೆಸ್ಟ್ ಮಾಡ್ತೀರಿ ಸಾಹೇಬ್ರೆ. ಡಾಕ್ಟ್ರು ಸಿಸ್ಟರ್‍ನ ಕರ್‍ದು ಹೇಳ್ತಾರೆ: ನೋಡಮ್ಮಾ ಆ ಇಬ್ರುದು ಗಂಟಲ್ದು ದ್ರವಾನ ತೊಗೊ, ಮತ್ತೆ ಅವ್ರನ್ನ ಒಳ್ಗೆ ವಾರ್ಡ್‍ನಲ್ಲಿ ಹಾಕು. ಕಾಳ ಕಾಳಿ: ಸಾಹೇಬ್ರೆ, ಕೋವಿಡ್ದು ವರ್ದಿ ಯಾವಾಗ್ ಬರ್ತೆ? ಡಾಕ್ಟ್ರು: ಅದು ಮೂರ್ನಾಕು ದಿನ ಆಗುತ್ತೆ ಅಲ್ಲಿವರ್ಗೆ ಅವ್ರು ಇಲ್ಲೇ ಇರ್ಲಿ, ನೀವ್ ಹೋಗಿ. ಕಾಳ ಕಾಳಿÀ: ಹ್ಞಾ ಅವ್ರಿಗೆ ಊಟ-ತಿಂಡಿ ಯಾರ್ ಕೊಡೋದು? ಸಿಸ್ಟರ್: ನಾವೇ ಕೊಡ್ತೀವಿ ಹೋಗ್ರಿ, ಡಾಕ್ಟ್ರಿಗೆ ಡಿಸ್ಟರ್ಬ್ ಮಾಡ್ ಬೇಡಿ. ಕಾಳ ಕಾಳಿ: ಅದ್ ಸರಿ ಅವ್ರಿಗೆ ಬಿಪಿ ಎದೆ ನೋವಿಗೇನ್ಮಾಡೋದು. ಸಿಸ್ಟರ್: ಅದೇನು ಆಗೊಲ್ಲ ಬಿಡ್ರಿ ಅದ್ರ ಪಾಡಿಗೆ ಅದಿರುತ್ತೆ. ಏನಿದ್ರೂ ಕೋವಿಡ್ಡು ವರ್ದಿ ಬಂದ್ ಬಳಿಕ ಟ್ರೀಟ್‍ಮೆಂಟ್ ಶುರುವಾಗುತ್ತೆ. ಕಾಳ ಕಾಳಿ ಗಾಬ್ರಿಯಿಂದ: ಅಷ್ಟೊತ್ತಿಗೆ ಅವ್ರೇನಾದ್ರೂ ಸತ್‍ಗಿತ್ ಹೋದ್ರೆ? ಆಯ: ಆ ಸಿಸ್ಟರ್ನ ಯ್ಯಾಕ್ರೀ ಅಷ್ಟ್ ಗೋಳ್ ಹೊಯ್ಕೊಳ್ತೀರಿ. ಬಿಡ್ತು ಅನ್ರಿ, ನಿಮ್ ತಂದೆ ತಾಯ್ಗೆ ಏನೂ ಆಗೊಲ್ಲ. ಹಾಗೇನಾದ್ರೂ ಸತ್ ಗಿತ್ ಹೋದ್ರೆ ಅದು “ಕೋವಿಡ್ ಡೆತ್” ಎಂದು ರೆಕಾರ್ಡ್ ಆಗುತ್ತೆ ಬಿಡ್ರಿ. ಕಾಳಿ: ಅಯ್ಯೋ ನಂಗೊತ್ತಿದ್ ಔಷ್ದೀನೇ ಕೊಟ್ಟು ಮನೇಲಿಟ್ಕೋಬೌದಿತ್ತಲ್ಲಪ್ಪೋ, ಯಾಕಿಲ್ಲಿಗ್ ಬಂದ್ವಿ. ಎಂದು ಗೊಣಗುತ್ತ ತೆರಳಿದರು. ನಾಲ್ಕು ದಿನ ಕಳ್ದು ಬಂದಾಗ ಮತ್ತೆ ಬೋರ ಎದುರು ಸಿಕ್ಕಿದ. ಕಾಳ ಕಾಳಿ ಹೇಳಿದ್ರು: ಬೋರ ನೀನ್ ಮೊದ್ಲೇ ನಮ್ ಗಮ್ನನ್ಕ್ಕೆ ತಂದಿದ್ಯ ನೀನ್ ಸುಳ್ ಹೇಳ್ತಾ ಇದ್ಯಾಂತ ಒಳ್ಗೆ ಹೋಗಿ ಸಿಕ್ಕಾಕೊಂಬುಟ್ವು. ನಮ್ ತಂದೆ ತಾಯ್ ಸ್ಥಿತಿ ಏನಾದ್ರೂ ಗೊತ್ತಾಯ್ತ ಬೋರ? ಬೋರ: ಗಂಟು- ಮೂಟೆ ಬಿಟ್ಟು. ರಮಾರಮಣ ಗೋವಿಂದ ಎಂದು ಉಸ್ರು ಬಿಟ್ಬಿಟ್ಟು ಹೋಗ್ಬಿಟ್ಟವ್ರೆ ಎಂದಾಗ ಧರೆಗೆ ಕುಸಿದ ಕಾಳ ಕಾಳಿಯ ಶಬ್ದದಿಂದ ಆಸ್ಪತ್ರೆಯಲ್ಲಿದ್ದ ರೋಗಿಗಳು ಭಯದಿಂದ ಚೀರಿದ್ದು ಕೇಳಿ ಬೋರ ಸ್ಥಳದಿಂದ ಕಾಲ್ಕಿತ್ತ!

- ಎಂಪರರ್