ಮಡಿಕೇರಿ, ಆ. 20: ಮಡಿಕೇರಿಯೊಳಗೆ ತಾ. 19 ರಿಂದ ಬಿಳಿ ಬಣ್ಣದ ಕಾರೊಂದು ಗಮರ್ನ್‍ಮೆಂಟ್ ಆಫ್ ಇಂಡಿಯಾ ಫಲಕ ಅಳವಡಿಕೆಯೊಂದಿಗೆ ಸಂಶಯಾಸ್ಪದ ರೀತಿಯಲ್ಲಿ ಸಂಚರಿಸುತ್ತಿರುವ ಬಗ್ಗೆ ನಾಗರಿಕರು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಗಮನಕ್ಕೆ ತಂದಿದ್ದಾರೆ.ಈ ವಿಷಯ ಗಮನಿಸಿರುವ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಕೂಡ, ಜಿಲ್ಲಾಧಿಕಾರಿಗಳ ಅರಿವಿಗೆ ವಿಷಯ ಮುಟ್ಟಿಸಿದ್ದು, ಈಗಾಗಲೇ ಪೊಲೀಸ್ ತನಿಖೆಗೆ ನಿರ್ದೇಶಿಸಿರುವದಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಪ್ರತಿಕ್ರಿಯಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ (ಮೊದಲ ಪುಟದಿಂದ) ಅವರನ್ನು ‘ಶಕ್ತಿ’ ಸಂಪರ್ಕಿಸಿದಾಗ ತಮ್ಮ ಗಮನಕ್ಕೂ ವಿಷಯ ಸಿಕ್ಕಿದ್ದು, ಪೊಲೀಸರು ಕಾರಿನ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಈ ಕಾರು ನಗರದ ಹಲವು ಅಂಗಡಿಗಳ ಎದುರು ಆಗಾಗ್ಗೆ ಬಂದು ನಿಲ್ಲುತ್ತಿತ್ತು. ಅಪರಚಿತ ವ್ಯಕ್ತಿಯೊಬ್ಬ ಕಾರಿನಿಂದ ಇಳಿದು ಹಲವರೊಂದಿಗೆ ಮಾತನಾಡಿ ಬರುತ್ತಿದ್ದರು. ಮತ್ತೆ ಕಾರು ಹತ್ತಿ ಹಳೆಯ ಖಾಸಗಿ ಬಸ್ ನಿಲ್ದಾಣ ಬಳಿಯ ಕೆಲವು ಅಂಗಡಿಗಳಿಗೂ ತೆರಳಿದ್ದ ಬಗ್ಗೆ ಸಾರ್ವಜನಿಕರು ವಿವರಿಸಿದ್ದಾರೆ.ಈ ಕಾರಿನ ನಂಬರಿನ ಜಾಡು ಹಿಡಿದು ವಿವರ ಸಂಗ್ರಹಿಸಿದಾಗ ಕಾರಿನ ಮಾಲೀಕ ‘ಒಂಓಂಉIಓಉ Pಂಖಖಿಓಇಖ’ ಎಂದೂ ಬೆಂಗಳೂರಿನ ಪೂರ್ವ ಆರ್‍ಟಿಓ ಕಚೇರಿಯಲ್ಲಿ ನೋಂದಾಯಿಸಲಾಗಿದೆಯೆಂದು ತಿಳಿಸಲಾಗಿದೆ.