*ಗೋಣಿಕೊಪ್ಪಲು, ಆ. 20: ಬಿಳುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಉಪ್ಪಂಗಡ ದೀರಜ್ ಪೂಣಚ್ಚ ಆಯ್ಕೆಯಾಗಿದ್ದಾರೆ. ವೀರಾಜಪೇಟೆ ತಾಲೂಕು ಯುವ ಮೋರ್ಚಾ ಅಧ್ಯಕ್ಷ ಸೋಮೆಯಂಡ ಕವನ್ ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ನೆಲ್ಲೀರ ಚಲನ್ ನೇತೃತ್ವದಲ್ಲಿ ನಡೆದ ಆಯ್ಕೆಯಲ್ಲಿ ಉಪಾಧ್ಯಕ್ಷರಾಗಿ ಶಮನ್ ಕಾರ್ಯಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಚಿಲ್ಲೋವಂಡ ನಾಚಪ್ಪ, ಕಾರ್ಯದರ್ಶಿಯಾಗಿ ಮಾದಪಂಡ ಹರ್ಷಿತ್, ಟಿ.ಎಸ್. ನಂಜಪ್ಪ ಅವರನ್ನು ಆರಿಸಲಾಯಿತು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಂಞಂಗಡ ಅರುಣ್ ಭೀಮಯ್ಯ, ಮುಖಂಡರಾದ ಕುಪ್ಪಂಡ ಗಿರೀಶ್, ವಾಟೇರಿರ ಬೋಪಣ್ಣ, ಮುಕ್ಕಾಟೀರ ಕುಶಾಲಪ್ಪ ಮುಕ್ಕಾಟೀರ ಯೋಗೇಶ್, ವಾಟೆರಿರ ರಾಜಪ್ಪ, ಪೊನ್ನಣ್ಣ, ಎಂ.ಎಂ. ತಿಮ್ಮಯ್ಯ ಹಾಜರಿದ್ದರು.