ಗೋಣಿಕೊಪ್ಪಲು, ಆ.20: ಈ ಬಾರಿ ಸುರಿದ ಮಳೆ ಗಾಳಿಯಿಂದ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ರೈತರ ಭತ್ತದ ಗದ್ದೆಗಳು, ಕಾಫಿ ತೋಟಗಳು ಹಾಳಾಗಿದ್ದವು.ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಘಟಕದ ಅಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಮುಂದಾಳತ್ವದಲ್ಲಿ ರೈತ ಮುಖಂಡರು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರನ್ನು ಭೇಟಿ ಮಾಡಿ, ರೈತರಿಗೆ ಬೆಳೆ ನಷ್ಟ ಸಂಭವಿಸಿದ ಬಗ್ಗೆ ವಿವರ ನೀಡಿ ರೈತರ ಭತ್ತದ ಗದ್ದೆಗಳಿಗೆ ಅಧಿಕಾರಿಗಳು ಭೇಟಿ ನೀಡುವಂತೆ ಮನವಿ ಸಲ್ಲಿಸಿದ್ದರು.

ಜಿಲ್ಲಾಡಳಿತ ಸೂಚನೆ ಮೇರೆಗೆ ಮಳೆಯಿಂದ ಅತಿ ಹೆಚ್ಚು ನಷ್ಟ ಸಂಭವಿಸಿದ ಪೆÇನ್ನಂಪೇಟೆ ಹೋಬಳಿಯ ಕಿರುಗೂರು, ಮತ್ತೂರು ಹಾಗೂ ಇತರ ಪ್ರದೇಶಗಳಿಗೆ ಕೃಷಿ, ಕಂದಾಯ, ಅಧಿಕಾರಿಗಳು ರೈತ ಮುಖಂಡರ ಸಮ್ಮುಖದಲ್ಲಿ ತೆರಳಿ ನಷ್ಟ ಸಂಭವಿಸಿದ ಬಗ್ಗೆ ವಿವರ ಪಡೆದರು.

ಕೃಷಿ ಇಲಾಖೆಯ ವೀರಾಜಪೇಟೆ ತಾಲೂಕು ನಿರ್ದೇಶಕಿ ರೀನಾ, ಕಂದಾಯ ಇಲಾಖೆಯ ಪರಿವೀಕ್ಷಕ ಮಾಲಪ್ಪ ಹಾಗೂ ಕಿರುಗೂರು ಪಂಚಾಯಿತಿ ಪಿಡಿಒ ಗಯಾ ಸರ್ವೆ ಕಾರ್ಯ ನಡೆಸಿದರು.ಈ ಸಂದರ್ಭ ರೈತ ಸಂಘದ ಜಿಲ್ಲಾದ್ಯಕ್ಷ ಕಾಡ್ಯಮಾಡ ಮನುಸೋಮಯ್ಯ, ಪೆÇನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್, ಮಾಯಮುಡಿ ಅಧ್ಯಕ್ಷ ಪುಚ್ಚಿಮಾಡ ರಾಯ್ ಮಾದಪ್ಪ, ರೈತ ಮುಖಂಡರಾದ ಚಪ್ಪುಡೀರ ವಿವೇಕ್, ಸೋಮಣ್ಣ, ಬೋಪಣ್ಣ, ಕಿರಣ್, ನಂದಾ, ರಾಜೇಶ್, ಬೋಸ್, ಹೊನ್ನಿಕೊಪ್ಪದ ಎಂ.ಬಿ. ಅಶೋಕ, ಹರೀಶ್, ಮಾಯ ಮುಡಿಯ ಕೆ.ಜೆ. ಬಾಬು, ಎಸ್.ಪಿ. ಜಗದೀಶ್ ಸೇರಿದಂತೆ ಅನೇಕ ರೈತ ಮುಖಂಡರು ಹಾಜರಿದ್ದರು.