ನಾಪೆÇೀಕ್ಲು, ಆ. 20: ನಗರದ ರಸ್ತೆಗಳು ಗುಂಡಿಮಯವಾಗಿದ್ದು ವಾಹನ ಸವಾರರಿಗೆ ಸವಾಲಾಗಿ ಪರಿಣಮಿಸಿದೆ. ನಗರದ ರಾಮಮಂದಿರದ ಪಕ್ಕದಲ್ಲಿ ಭಾರೀ ಗಾತ್ರದ ಗುಂಡಿ ಇದ್ದು, ಅಪಾಯವನ್ನು ಆಹ್ವಾನಿಸುವಂತಿದೆ. ಗ್ರಾಮ ಪಂಚಾಯತ್ ಜಂಕ್ಷನ್‍ನಿಂದ ಮಾರುಕಟ್ಟೆ ರಸ್ತೆಯಲ್ಲಿ ಗುಂಡಿಗಳೇ ತುಂಬಿದ್ದು, ವಾಹನಗಳು ಅಡ್ಡಾದಿಡ್ಡಿ ಚಲಿಸಿ ದಾರಿಹೋಕರು ಭಯದಲ್ಲಿ ನಡೆದಾಡಬೇಕಾದ ಪರಿಸ್ಥತಿ ನಿರ್ಮಾಣವಾಗಿದೆ.

ಈ ರಸ್ತೆಗಳನ್ನು ಇತ್ತೀಚೆಗಷ್ಟೆ ಗುಂಡಿ ಮುಚ್ಚಿ ದುರಸ್ತಿ ಮಾಡಲಾಗಿದ್ದು, ಕಳಪೆ ಕಾಮಗಾರಿಯಿಂದ ರಸ್ತೆ ಮತ್ತೆ ಗುಂಡಿ ಬಿದ್ದಿದೆ. ಸಂಬಂಧಪಟ್ಟವರು ಕೂಡಲೇ ಗುಂಡಿಗಳನ್ನು ಮುಚ್ಚಿ ಆಗುವ ಅಪಾಯವನ್ನು ತಪ್ಪಿಸಿ ಸರಾಗ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಲೋಕೋಪಯೋಗಿ ಇಲಾಖೆಯವರಲ್ಲಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.