ಶನಿವಾರಸಂತೆ, ಆ. 18: ಶನಿವಾರಸಂತೆ ಪೊಲೀಸ್ ಠಾಣೆಗೆ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ದಕ್ಷಿಣ ವಲಯದ ವಿಪುಲ್ಕುಮಾರ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
2020ನೇ ಮಾರ್ಚ್ ತಿಂಗಳಲ್ಲಿ ಠಾಣಾ ಅಪರಾಧ ದಳದ ಪೊಲೀಸರಾದ ಎಸ್.ಸಿ. ಲೋಕೇಶ್ ಹಾಗೂ ಮುರುಳಿ ಅವರುಗಳು, ಡಿವೈಎಸ್ಪಿ ಶೈಲೇಂದ್ರ ಹಾಗೂ ವೃತ್ತ ನಿರೀಕ್ಷಕ ನಂಜುಂಡೇಗೌಡ ಅವರ ಮಾರ್ಗದರ್ಶನದಲ್ಲಿ 2017 ರಿಂದ 2020ರವರೆಗೆ ಬಾಕಿ ಇದ್ದ 12 ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಜೈಲಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿರುವ ಬಗ್ಗೆ ಲೋಕೇಶ್ ಮತ್ತು ಮುರುಳಿ ಅವರ ಕಾರ್ಯವನ್ನು ಶ್ಲಾಘಿಸಿ ಬಹುಮಾನ ಘೋಷಿಸಿದರು. ಮುಂದೆಯೂ ಪ್ರಕರಣಗಳನ್ನು ಪತ್ತೆ ಹಚ್ಚಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಅತಿಮುಖ್ಯವಾಗಿದ್ದು, ಎಲ್ಲಾ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಉತ್ತಮ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು. ಠಾಣಾಧಿಕಾರಿ ಹೆಚ್.ಇ.ದೇವರಾಜು ಹಾಗೂ ಸಿಬ್ಬಂದಿಗಳು ಮರಳು ದಂಧೆ, ಜೂಜಾಟಗಳನ್ನು ಪತ್ತೆ ಹಚ್ಚಿ ಕರ್ತವ್ಯ ನಿರ್ವಹಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.