ಮಡಿಕೇರಿ, ಆ. 18: ವಿಶ್ವದಲ್ಲಿ ನೂರು ವಷರ್Àಗಳ ಇತಿಹಾಸ ಇರುವ ಲಯನ್ಸ್ ಸೇವಾ ಸಂಸ್ಥೆಯು ಜನಪರ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು, ಮಾನವರು ಸಮಯವನ್ನು ಸೇವೆಗೆ ತೊಡಗಿಸಿಕೊಳ್ಳಬೇಕು ಎಂದು 2020-21 ನೇ ಸಾಲಿನ ವೀರಾಜಪೇಟೆ ಲಯನ್ಸ್ ಕ್ಲಬ್ ಶಾಖೆಯ ಪದಗ್ರಹಣ ಕಾರ್ಯಕ್ರಮದಲ್ಲಿ ಲಯನ್ ಎಂ.ಎಂ. ಗಣಪತಿ ಹೇಳಿದರು.

2020-21ನೇ ಸಾಲಿನ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಪ್ರಸನ್ನ ಎ.ಪಿ. ಕಾರ್ಯದರ್ಶಿಯಾಗಿ, ಪುಷ್ಪರಾಜ್ ಬಿ.ಎಸ್. ಹಾಗೂ ಕೋಶಾಧಿಕಾರಿಯಾಗಿ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ಆಯ್ಕೆ ಆಗಿದ್ದು ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ 317 ವಲಯ 3 ರ ಸಲಹೆಗಾರ ಎ.ಪಿ. ಸುಬ್ರಮಣಿ ಉಪಸ್ಥಿತರಿದ್ದರು. ಕೊರೊನಾ ಸಮಯದಲ್ಲಿ ಕಾರ್ಯಕ್ರಮವನ್ನು ಸಾರ್ವಜನಿಕ ಅಂತರ ಕಾಪಾಡಿಕೊಂಡು ಆಯೋಜಿಸಲಾಗಿತ್ತು.