ಕೂಡಿಗೆ, ಆ. 18: ಸೋಮವಾರಪೇಟೆ. ಕಡೆಯಿಂದ ಕುಶಾಲನಗರಕ್ಕೆ ಹೋಗುವ ಹಾರಂಗಿ ಯಡವನಾಡು ಜಂಕ್ಷನ್ ಬಳಿ ಖಚಿತ ಮಾಹಿತಿ ಮೇರೆಗೆ ರೂ. 2 ಲಕ್ಷ ವೆಚ್ಚದ ಬೀಟಿ ಮರ ಸೇರಿದಂತೆ ರೂ. 3.50 ಲಕ್ಷದ ಅಶೋಕ್ ಲೈಲ್ಯಾಂಡ್ ಪಿಕ್‍ಅಪ್ ವಾಹನವನ್ನು (ಕೆ.ಎ.19 ಎ.ಬಿ 1029) ಹುದುಗೂರು ಉಪ ಅರಣ್ಯ ಅಧಿಕಾರಿಗಳ ತಂಡದವರು ವಶಪಡಿಸಿಕೊಂಡಿದ್ದಾರೆ.
ಸೋಮವಾರಪೇಟೆ ಕಡೆಯಿಂದ ಕುಶಾಲನಗರಕ್ಕೆ ಬೀಟಿ ನಾಟಗಳನ್ನು ತುಂಬಿಕೊಂಡು ಬರುತ್ತಿರುವ ಮಾಹಿತಿಯ ಮೇರೆಗೆ ಯಡವನಾಡು ಹಾರಂಗಿ ರಸ್ತೆಯಲ್ಲಿ ಅಡ್ಡಗಟ್ಟಿದಾಗ ಚರಂಡಿ ಬದಿಗೆ ಇಳಿಸಿ ಇಬ್ಬರು ಅರೋಪಿಗಳು ಪರಾರಿಯಾಗಿದ್ದಾರೆ.
ಸೋಮವಾರಪೇಟೆ ಎಸಿಎಫ್ ನೆಹರು ಹುದುಗೂರು ಉಪ ಅರಣ್ಯ ವಲಯ ಅಧಿಕಾರಿಗಳು ಮೊಕದ್ದಮೆ ದಾಖಸಿದ್ದಾರೆ. ವಲಯ ಅರಣ್ಯ ಅಧಿಕಾರಿ ಶಮಾ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯ ಅಧಿಕಾರಿಗಳಾದ ಸತೀಶ್, ಭರತ್ ಕುಮಾರ್, ಅರಣ್ಯ ರಕ್ಷಕರಾದ ಹೆಚ್.ಪಿ. ರಾಜಣ್ಣ, ಭೀಮಣ್ಣ, ಪ್ರಸಾದ್, ಕುಮಾರ್, ಅಂತೋಣಿ, ವಾಹನ ಚಾಲಕ ಸಂತೋಷ್ ಭಾಗವಹಿಸಿದ್ದರು.