ಜಿಲ್ಲಾ ಸರಾಸರಿ 72 ಇಂಚು

ಮಡಿಕೇರಿ, ಆ. 18: ಪ್ರಸಕ್ತ ಸಾಲಿನಲ್ಲಿ ಕೊಡಗು ಜಿಲ್ಲೆಯ ಮೂರು ತಾಲೂಕುಗಳ ಪೈಕಿ ಮಡಿಕೇರಿ ತಾಲೂಕಿಗೆ ಈತನಕ ಅತಿಹೆಚ್ಚು ಮಳೆಯಾಗಿದೆ. ತಾಲೂಕಿನಲ್ಲಿ ಜಿಲ್ಲಾಡಳಿತದ ಮಾಹಿತಿಯಂತೆ ತಾ. 18ರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಜನವರಿಯಿಂದ ಈತನಕ 101.39 ಇಂಚು ಮಳೆ ದಾಖಲಾಗಿದೆ.

ಕಳೆದ ವರ್ಷವೂ ಈ ಅವಧಿಯಲ್ಲಿ 100 ಇಂಚು ಮಳೆಯಾಗಿತ್ತು. ಜಿಲ್ಲಾ ಸರಾಸರಿ ಈ ಬಾರಿ ಜನವರಿಯಿಂದ ಈತನಕ 72 ಇಂಚು ಆಗಿದ್ದರೆ, ಕಳೆದ ವರ್ಷ 75.70 ಇಂಚಾಗಿತ್ತು.

ವೀರಾಜಪೇಟೆ ತಾಲೂಕಿನಲ್ಲಿ ಜನವರಿಯಿಂದ ಈತನಕ 65.89 ಇಂಚು ಹಾಗೂ ಕಳೆದ ಬಾರಿ 72 ಇಂಚು ಮಳೆ ಬಿದ್ದಿತ್ತು. ಸೋಮವಾರಪೇಟೆ ತಾಲೂಕಿನಲ್ಲಿ ಈ ಬಾರಿ 48.73 ಇಂಚು ಹಾಗೂ ಕಳೆದ ವರ್ಷ 50.35 ಇಂಚು ಮಳೆಯಾಗಿದೆ.

ತಾ. 18ರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 1.18 ಇಂಚು ಮಳೆಯಾಗಿದೆ.

ಮಡಿಕೇರಿ ತಾಲೂಕಿನಲ್ಲಿ 1.39, ವೀರಾಜಪೇಟೆ ತಾಲೂಕಿನಲ್ಲಿ 0.92 ಹಾಗೂ ಸೋಮವಾರಪೇಟೆಯಲ್ಲಿ 1.24 ಇಂಚು ಮಳೆ ಕಳೆದ 24 ಗಂಟೆಗಳ ಅವಧಿಯಲ್ಲಿ ಸುರಿದಿದೆ.

ಹೋಬಳಿವಾರು ಲೆಕ್ಕಾಚಾರದಂತೆ ಶಾಂತಳ್ಳಿಗೆ 2.24, ಕೊಡ್ಲಿಪೇಟೆ 2.23, ಪೊನ್ನಂಪೇಟೆ 2.23, ಭಾಗಮಂಡಲ 1.65, ಶ್ರೀಮಂಗಲ 1.28, ಶನಿವಾರಸಂತೆ 1.44, ಹುದಿಕೇರಿ 0.84 ಇಂಚು ಮಳೆಯಾಗಿದ್ದರೆ, ಇತರ ಹೋಬಳಿಗಳಲ್ಲಿ ಪ್ರಮಾಣ ಕಡಿಮೆ ಇದೆ.