ಸೋಮವಾರಪೇಟೆ, ಆ. 18: ಹೊಂಡಾ ಗುಂಡಿಗಳ ಆಗರವಾಗಿ ರುವ ಆಲೇಕಟ್ಟೆ-ಕಾನ್ವೆಂಟ್‍ಬಾಣೆ ಸಂಪರ್ಕ ರಸ್ತೆಯ ದುಸ್ಥಿತಿಯಿಂದ ಬೇಸತ್ತ ಸ್ಥಳೀಯರು, ರಸ್ತೆಯ ಗುಂಡಿಗಳಿಗೆ ಬಾಳೆ ಗಿಡ ನೆಟ್ಟು ಪ್ರತಿಭಟಿಸಿದರು.
ಸೋಮವಾರಪೇಟೆ-ಶಾಂತಳ್ಳಿ ರಾಜ್ಯಹೆದ್ದಾರಿಯಲ್ಲಿ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿರುವದರಿಂದ ಈ ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ತಡೆಬಿದ್ದಿದ್ದು, ಪರಿಣಾಮ ಶಾಂತಳ್ಳಿ ರಸ್ತೆ ಕಡೆಗೆ ಸಂಚರಿಸುವ ವಾಹನಗಳು ಕಾನ್ವೆಂಟ್‍ಬಾಣೆಯಿಂದ ಆಲೇಕಟ್ಟೆ, ಪದ್ಮಕ್ಯಾಂಟೀನ್ ಜಂಕ್ಷನ್ ಮಾರ್ಗವಾಗಿ ತೆರಳುತ್ತಿವೆ.
ಅಧಿಕ ವಾಹನಗಳ ಓಡಾಟದಿಂದ ರಸ್ತೆಯಲ್ಲಿ ಬೃಹತ್ ಹೊಂಡಗಳು ನಿರ್ಮಾಣವಾಗಿದ್ದು, ಹಲವಷ್ಟು ಅವಘಡಗಳು ಸಂಭವಿಸುತ್ತಿವೆ. ಈಗಾಗಲೇ 60ಕ್ಕೂ ಅಧಿಕ ಬೈಕ್ ಸವಾರರು ಬಿದ್ದು ಗಾಯಪಡಿಸಿ ಕೊಂಡಿದ್ದು, ನಾಲ್ಕು ಚಕ್ರದ ವಾಹನಗಳು ತೆರಳಲು ಕಷ್ಟಸಾಧ್ಯ ವಾಗಿದೆ. ರಸ್ತೆಯ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಹಲವಷ್ಟು ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆದಿದ್ದರೂ ಯಾವದೇ ಪ್ರಯೋಜನ ವಾಗಿಲ್ಲ ಎಂದು ಸ್ಥಳೀಯರಾದ ಚೇತನ್, ಮಂಜುನಾಥ್, ಮಹೇಶ್ ಸೇರಿದಂತೆ ಇತರರು ಆರೋಪಿಸಿದರು.
ರಸ್ತೆಯಲ್ಲಿ ಸಂಚರಿಸಲು ಅಧಿಕ ವಾಹನಗಳ ಓಡಾಟದಿಂದ ರಸ್ತೆಯಲ್ಲಿ ಬೃಹತ್ ಹೊಂಡಗಳು ನಿರ್ಮಾಣವಾಗಿದ್ದು, ಹಲವಷ್ಟು ಅವಘಡಗಳು ಸಂಭವಿಸುತ್ತಿವೆ. ಈಗಾಗಲೇ 60ಕ್ಕೂ ಅಧಿಕ ಬೈಕ್ ಸವಾರರು ಬಿದ್ದು ಗಾಯಪಡಿಸಿ ಕೊಂಡಿದ್ದು, ನಾಲ್ಕು ಚಕ್ರದ ವಾಹನಗಳು ತೆರಳಲು ಕಷ್ಟಸಾಧ್ಯ ವಾಗಿದೆ. ರಸ್ತೆಯ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಹಲವಷ್ಟು ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನ ಸೆಳೆದಿದ್ದರೂ ಯಾವದೇ ಪ್ರಯೋಜನ ವಾಗಿಲ್ಲ ಎಂದು ಸ್ಥಳೀಯರಾದ ಚೇತನ್, ಮಂಜುನಾಥ್, ಮಹೇಶ್ ಸೇರಿದಂತೆ ಇತರರು ಆರೋಪಿಸಿದರು.
ರಸ್ತೆಯಲ್ಲಿ ಸಂಚರಿಸಲು ಬೆಂಬಲ ಸೂಚಿಸಿ, ಇಲಾಖೆಯ ನಿರ್ಲಕ್ಷ್ಯಕ್ಕೆ ಹಿಡಿಶಾಪ ಹಾಕಿದರು.
ಈ ಬಗ್ಗೆ ಜಿಲ್ಲಾ ಪಂಚಾಯತ್ ಅಭಿಯಂತರರ ಗಮನ ಸೆಳೆದ ಮೇರೆ, ತಕ್ಷಣ ವೆಟ್‍ಮಿಕ್ಸ್ ಹಾಕಿ ರಸ್ತೆಯ ಗುಂಡಿಗಳನ್ನು ಮುಚ್ಚುವ ಭರವಸೆ ನೀಡಿದರು. ನಂತರ ಪ್ರತಿಭಟನೆಯನ್ನು ಹಿಂಪಡೆಯ ಲಾಯಿತು.
ಸ್ಥಳೀಯರಾದ ರಮೇಶ್, ಸುಕುಮಾರ್, ಮಾಜೀ ಸೈನಿಕ ರಮೇಶ್, ರತನ್, ರಾಜೇಂದ್ರ, ಗಗನ್, ಮನ್‍ಮೋಹನ್ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ತಕ್ಷಣ ಸ್ಪಂದನ: ಗ್ರಾಮಸ್ಥರ ಪ್ರತಿಭಟನೆಗೆ ತಕ್ಷಣ ಸ್ಪಂದಿಸಿದ ಜಿಲ್ಲಾ ಪಂಚಾಯತ್ ಅಭಿಯಂತರ ವೀರೇಂದ್ರ ಅವರು, ರಸ್ತೆ ದುರಸ್ತಿಗಾಗಿ ಕ್ರಮವಹಿಸುವ ಭರವಸೆ ನೀಡಿ ದರಲ್ಲದೇ, ನಾಲ್ಕು ಲೋಡ್ ಎಂ.ಸ್ಯಾಂಡ್‍ನ್ನು ಸ್ಥಳಕ್ಕೆ ಸಾಗಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು. ಅದರಂತೆ ಎಂಸ್ಯಾಂಡ್‍ನ್ನು ಸ್ಥಳದಲ್ಲಿ ದಾಸ್ತಾನಿರಿಸಲಾಗಿದ್ದು, ತಾ. 19 ರಿಂದ ಗುಂಡಿಮುಚ್ಚುವ ಕಾಮಗಾರಿ ನಡೆಯಲಿದೆ.