ಚೆಟ್ಟಳ್ಳಿ, ಆ. 19: ವೀರಾಜಪೇಟೆಯ ಮಗ್ಗುಲ ಗ್ರಾಮದ ಚೋವಂಡ ಮನುಮಂದಣ್ಣ ಅವರ ಭತ್ತದ ಗದ್ದೆಗೆ ನಿತ್ಯವು ಕಾಡುಹಂದಿಗಳು ದಾಳಿ ಇಟ್ಟು ನಾಟಿ ಮಾಡಿದ ಭತ್ತದ ಪೈರನ್ನು ನಿತ್ಯವೂ ನಾಶಪಡಿಸುತ್ತಿವೆ. ಕಾಡಾನೆಗಳು ಸಹ ಭತ್ತದ ಗದ್ದೆಗೆ ಬಂದು ನಷ್ಟಪಡಿಸುತ್ತಿವೆ. ಕಾಡುಪ್ರಾಣಿಗಳಿಂದ ಭತ್ತ ಬೆಳೆಯುವುದೇ ಕಷ್ಟವಾಗಿದೆಯೆಂದು ಚೋವಂಡ ಮನುಮಂದಣ್ಣ ಹೇಳಿದ್ದಾರೆ. ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಕೋರಿದ್ದಾರೆ.