ಸುಂಟಿಕೊಪ್ಪ,ಆ.19: ರೊಚ್ಚಿಗೆದ್ದ ಕಾಡಾನೆಗಳು ರೈತರು ಬೆಳೆದ ಶುಂಠಿ, ಬಾಳೆ, ಕೇನೆ, ಕಾಫಿ ತೋಟಗಳಿಗೆ ಲಗ್ಗೆಯಿಟ್ಟು ಸಂಪೂರ್ಣ ಧ್ವಂಸಗೊಳಿಸಿದ್ದು ಕೃಷಿಕರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ನಾಕೂರು ಶಿರಂಗಾಲ, ಅಂದಗೋವೆ, ಕಲ್ಲೂರು, ಹೆರೂರು, ಕಾನ್‍ಬೈಲ್, ಮಂಜಿಕೆರೆ ಭಾಗಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ತಾ.17 ಅರಣ್ಯ ಇಲಾಖೆಯಿಂದ ಕಾಡಿಗೆ ಅಟ್ಟುವ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸಿ ಕಾಡಾನೆ ಗಳನ್ನು ಕಾಡಿಗೆ ಓಡಿಸಲು ಪ್ರಯತ್ನಿಸಿ ದರು. ಬಳಿಕ ರಾತ್ರಿ ಕಾಡಾನೆಗಳು ತೋಟಗಳಿಗೆ ಲಗ್ಗೆಯಿಟ್ಟು ಫಸಲುಗಳನ್ನು ತಿಂದು, ತುಳಿದು ನಾಶಪಡಿಸಿವೆ. ಅತಿವೃಷ್ಠಿಯಿಂದ ಕಂಗಾಲಾದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ನಾಟಿ ಮಾಡಿದ ಗದ್ದೆಯೂ ಇಲ್ಲದೆ ರೈತರು ಚಿಂತಾಕ್ರಾಂತರಾಗಿದ್ದಾರೆ.