ಮಡಿಕೇರಿ, ಆ. 19: ಶ್ರೀಮಂಗಲ ಬಳಿಯ ಕುರ್ಚಿ ಗ್ರಾಮದ ಅಜ್ಜಮಾಡ ಜೀವನ್ ಕುಶಾಲಪ್ಪ ಅವರ ಕಾಫಿ ತೋಟಕ್ಕೆ ತಾ. 15 ರಂದು ಆನೆಗಳ ಹಿಂಡು ನುಗ್ಗಿ ಅಂದಾಜು 100-200 ಕಾಫಿ ಗಿಡಗಳನ್ನು ಸಂಪೂರ್ಣ ನಾಶಪಡಿಸಿವೆ. ಇದರಿಂದ ಭಾರೀ ಪ್ರಮಾಣದ ನಷ್ಟವುಂಟಾಗಿದೆ. ತೋಟದ ಸುತ್ತ ಅರಣ್ಯ ಇಲಾಖೆ ಮತ್ತು ಸರಕಾರದಿಂದ ಸೋಲಾರ್ ಬೇಲಿಯನ್ನು ಅಳವಡಿಸಿದ್ದರೂ ಯಾವ ಪ್ರಯೋಜನವೂ ಆಗುತ್ತಿಲ್ಲ. ಶಾಶ್ವತ ಪರಿಹಾರಕ್ಕಾಗಿ ರೈಲುಕಂಬಿಗಳನ್ನು ಅಳವಡಿಸುವಂತೆ ಕುಶಾಲಪ್ಪ ಒತ್ತಾಯಿಸಿದ್ದಾರೆ.