ಮಡಿಕೇರಿ, ಆ. 19: ಜಿಲ್ಲೆಯಲ್ಲಿ ಕೊರೊನಾ ಸಂಬಂಧ ಸಾವಿನ ಪಟ್ಟಿಗೆ ಇಬ್ಬರು ಸೇರ್ಪಡೆಯಾಗಿದ್ದಾರೆ. ಸೋಮವಾರಪೇಟೆ ತಾಲೂಕಿನ ಮಾದಾಪುರದ 65 ವರ್ಷದ ಮಹಿಳೆ ಹಾಗೂ ತಿತಿಮತಿಯ 36 ವರ್ಷದ ಪುರುಷ ತಾ.19 ನಿಧನರಾಗಿದ್ದು, ಕೊರೊನಾ ಸಂಬಂಧ ಸಾವಿನ ಸಂಖ್ಯೆ 14 ಕ್ಕೆ ಏರಿದೆ. 65 ವರ್ಷದ ಮಹಿಳೆಗೆ: ಕಳೆದ 4 ವರ್ಷಗಳಿಂದ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದರು. 3 ದಿನಗಳ ಹಿಂದೆ ಇವರಿಗೆ ಕೆಮ್ಮು ಕಾಣಿಸಿಕೊಂಡಿದೆ. ಚಿಕಿತ್ಸೆಗೆ ಕುಶಾಲನಗರದ ಖಾಸಗಿ ಕ್ಲಿನಿಕ್‍ಗೆ ತೆರಳಿದ್ದು, ಕೋವಿಡ್ ಪರೀಕ್ಷೆ ಮಾಡಿಸುವಂತೆ ಇವರಿಗೆ ಸಲಹೆ ನೀಡಲಾಯಿತು. ತಾ.18 ರಂದು ಕೆಮ್ಮು ಜಾಸ್ತಿಯಾದ ಹಿನ್ನೆಲೆ ಕುಶಾಲನಗರದ ಸರ್ಕಾರಿ ಆಸ್ಪತ್ರೆಗೆ ತೆರಳಿ ಇ.ಸಿ.ಜಿ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ವರದಿಯಲ್ಲಿ ಇವರಿಗೆ ಹೃದಯಾಘಾತವಾಗಿರುವುದು ಕಂಡು ಬಂದಿದ್ದು, ಕುಶಾಲನಗರ ಸರ್ಕಾರಿ ಆಸ್ಪತ್ರೆಯ ವೈದ್ಯರು ತಕ್ಷಣವೇ ಉನ್ನತ ಆಸ್ಪತ್ರೆಗೆ ತೆರಳಲು ಸಲಹೆ ನೀಡಿದಂತೆ ಅದೇ ದಿನ ಸಂಜೆ 7.30 ಗಂಟೆಗೆ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ರ್ಯಾಪಿಡ್ ಆ್ಯಂಟಿಜನ್ ಕಿಟ್ ಮೂಲಕ ಕೋವಿಡ್ ಪರೀಕ್ಷೆ ನಡೆಸಿದ್ದು, ಸೋಂಕು ಇರುವುದು ದೃಢಪಟ್ಟಿದೆ. ಬಳಿಕ ಐ.ಸಿ.ಯು ಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು, ತಾ.19 ರಂದು ಬೆಳಿಗ್ಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತಪಟ್ಟ 36 ವರ್ಷದ ಪುರುಷ: ಈ ಹಿಂದಿನಿಂದಲೂ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ, ಹೃದಯ ಮತ್ತು ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದರು. ತಾ.5 ರಂದು ಇವರಿಗೆ ನೆಗಡಿ, ಕೆಮ್ಮು ಕಾಣಿಸಿಕೊಂಡಿದ್ದು ತಾ.7 ರಂದು ಗೋಣಿಕೊಪ್ಪಲುವಿನ ಸಮುದಾಯ (ಮೊದಲ ಪುಟದಿಂದ) ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದು, ಕೋವಿಡ್ ಸೋಂಕು ದೃಢಪಟ್ಟಿದೆ. ತಾ.9 ರಂದು ಸುಸ್ತು ಕಾಣಿಸಿಕೊಂಡಿದ್ದು, ಇವರಲ್ಲಿ ಆಮ್ಲಜನಕ ಪ್ರಮಾಣ ಕಡಿಮೆ ಇದ್ದುದರಿಂದ ಇವರನ್ನು ಕೋವಿಡ್ ಐ.ಸಿ.ಯು ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ತಾ.19 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಈ ಎರಡೂ ಪ್ರಕರಣಗಳಲ್ಲಿ ಸರ್ಕಾರದ ಕೋವಿಡ್ ಮಾರ್ಗಸೂಚಿಯಂತೆ ಮೃತ ದೇಹದ ಅಂತ್ಯಕ್ರಿಯೆಯನ್ನು ನಡೆಸಲಾಯಿತು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೊಸ ಪ್ರಕರಣಗಳ ವಿವರ
ಮಡಿಕೇರಿ ಸುದರ್ಶನ ಲೇಔಟಿನ 29 ವರ್ಷದ ಮಹಿಳೆ, ಮಡಿಕೇರಿ ರಾಣಿಪೇಟೆಯ 58 ವರ್ಷದ ಪುರುಷ, ಮಡಿಕೇರಿ ಡಿಎಆರ್ ವಸತಿ ಗೃಹದ 28 ವರ್ಷದ ಮಹಿಳೆ, ಕುಶಾಲನಗರ ಬಿ.ಎಂ ರಸ್ತೆಯ ಬ್ಯಾಂಕ್ ಆಫ್ ಇಂಡಿಯಾ ಬಳಿಯ 65 ವರ್ಷದ ಪುರುಷ, ಕುಶಾಲನಗರ ಪೆÇಲೀಸ್ ಗ್ರೌಂಡ್ ಬಳಿಯ ರಾಧಾಕೃಷ್ಣ ಬಡಾವಣೆಯ 10 ವರ್ಷದ ಬಾಲಕ, 57 ವರ್ಷದ ಮಹಿಳೆ, 28 ವರ್ಷದ ಪುರುಷ, ಮಡಿಕೇರಿ ಸ್ಟೋನ್ ಹಿಲ್ ರಸ್ತೆಯ ರೈಫೆಲ್ ರೇಂಜಿನ 27 ವರ್ಷದ ಮಹಿಳೆ, ಮಡಿಕೇರಿ ಸ್ಟೋನ್ ಹಿಲ್ ರಸ್ತೆಯ ರೈಫಲ್ ರೇಂಜಿನ 25 ಮತ್ತು 26 ವರ್ಷದ ಪುರುಷರು, ವೀರಾಜಪೇಟೆ ಕಲ್ಲುಬಾಣೆ ಅಂಚೆಯ ಅರ್ಜಿ ಗ್ರಾಮದ 38 ವರ್ಷದ ಮಹಿಳೆ, ವೀರಾಜಪೇಟೆ ಕಲ್ಲುಬಾಣೆ ಅಂಚೆಯ ಅರ್ಜಿ ಗ್ರಾಮದ 59 ವರ್ಷದ ಮಹಿಳೆ ಮತ್ತು 73 ವರ್ಷದ ಪುರುಷ, ವೀರಾಜಪೇಟೆ ಬೆಟೋಳಿ ಗ್ರಾಮ ಮತ್ತು ಅಂಚೆಯ 41 ಮತ್ತು 18 ವರ್ಷದ ಮಹಿಳೆ, ವೀರಾಜಪೇಟೆ ಬೆಟೋಳಿ ಅಂಚೆಯ ರಾಮನಗರ ಗ್ರಾಮದ 36 ವರ್ಷದ ಪುರುಷ, 28 ಮತ್ತು 66 ವರ್ಷದ ಮಹಿಳೆ, 4 ಮತ್ತು 2 ವರ್ಷದ ಬಾಲಕಿಯರು.
ಸುಂಟಿಕೊಪ್ಪದ ಮದುರಮ್ಮ ಬಡಾವಣೆಯ 62 ವರ್ಷದ ಪುರುಷ ಮತ್ತು 56 ವರ್ಷದ ಮಹಿಳೆ, ಸೋಮವಾರಪೇಟೆ ಕೊಡ್ಲಿಪೇಟೆ ನೀರುಗುಂದ ವೀರಭದ್ರೇಶ್ವರ ದೇವಾಲಯ ಬಳಿಯ 50 ವರ್ಷದ ಪುರುಷ, 30 ವರ್ಷದ ಮಹಿಳೆ, 10 ವರ್ಷದ ಬಾಲಕ ಮತ್ತು 10 ತಿಂಗಳ ಹೆಣ್ಣುಮಗು, ವೀರಾಜಪೇಟೆ ಹೊಲಮಾಳದ 52 ವರ್ಷದ ಪುರುಷ, 48 ವರ್ಷದ ಮಹಿಳೆ, 32 ವರ್ಷದ ಪುರುಷ, 29 ವರ್ಷದ ಮಹಿಳೆ, 5 ವರ್ಷದ ಬಾಲಕಿ, 29 ವರ್ಷದ ಪುರುಷ, 31 ವರ್ಷದ ಮಹಿಳೆ, 36 ವರ್ಷದ ಪುರುಷ ಮತ್ತು 13 ವರ್ಷದ ಬಾಲಕಿ.
ಗೋಣಿಕೊಪ್ಪ ಮುಕ್ಕುಂದ ಲೇಔಟಿನ 3ನೇ ಬ್ಲಾಕಿನ 41 ಮತ್ತು 68 ವರ್ಷದ ಪುರುಷ, 68 ವರ್ಷದ ಮಹಿಳೆ, 8 ವರ್ಷದ ಬಾಲಕಿ ಮತ್ತು 5 ವರ್ಷದ ಬಾಲಕ, ತಿತಿಮತಿ ಮಾರ್ಪಾಲ ಪೈಸಾರಿಯ 75 ವರ್ಷದ ಪುರುಷ, 35 ವರ್ಷದ ಮಹಿಳೆ ಮತ್ತು 16 ವರ್ಷದ ಬಾಲಕಿ, ವೀರಾಜಪೇಟೆ ಸುಂಕದಕಟ್ಟೆಯ 38 ವರ್ಷದ ಮಹಿಳೆ, 17 ಮತ್ತು 13 ವರ್ಷದ ಬಾಲಕರು, ಮಡಿಕೇರಿ ಸ್ಟೋನ್ ಹಿಲ್ ರಸ್ತೆಯ 68 ಮತ್ತು 65 ವರ್ಷದ ಪುರುಷ, 58 ವರ್ಷದ ಮಹಿಳೆ, ಸೋಮವಾರಪೇಟೆ ಗರಗಂದೂರು ಗ್ರಾಮದ 24 ವರ್ಷದ ಮಹಿಳೆ, ಮಾದಾಪುರ ಕಾರಿಕಾಡುವಿನ 32 ವರ್ಷದ ಮಹಿಳೆ.
ಕುಶಾಲನಗರ ಕುಡ್ಲೂರುವಿನ 27 ವರ್ಷದ ಪುರುಷ, ಕುಶಾಲನಗರ ಗೋಪಾಲ್ ವೃತ್ತದ 30 ವರ್ಷದ ಮಹಿಳೆ, ಕುಶಾಲನಗರ ಬೈಚನಹಳ್ಳಿ ರಾಯಲ್ ಕಂಫಟ್ರ್ಸ್ ಅಪಾಟ್ಮೆರ್ಂಟಿನ 45 ವರ್ಷದ ಪುರುಷ, ಕುಶಾಲನಗರ ಕೂಡುಮಂಗಳೂರುವಿನ 16 ವರ್ಷದ ಬಾಲಕ, ಸೋಮವಾರಪೇಟೆ ಎಂ.ಡಿ ಬ್ಲಾಕಿನ 19 ವರ್ಷದ ಮಹಿಳೆ, ಸೋಮವಾರಪೇಟೆ ಬಳಗುಂದ ಬಜೀರ್ ಗುಂಡಿಯ ಅಂಗನವಾಡಿ ಬಳಿಯ 51 ವರ್ಷದ ಪುರುಷ.
ಸೋಮವಾರಪೇಟೆ ಕೌಡಿಕಟ್ಟೆಯ 56 ವರ್ಷದ ಪುರುಷ, ಸಿದ್ದಾಪುರ ಪೆÇಲೀಸ್ ವಸತಿಗೃಹದ 29 ವರ್ಷದ ಪುರುಷ, ಸಿದ್ದಾಪುರ ವೀರಾಜಪೇಟೆ ಮುಖ್ಯ ರಸ್ತೆಯ ಮುತ್ತಪ್ಪ ದೇವಾಲಯ ಬಳಿಯ 52 ವರ್ಷದ ಪುರುಷ, ಸಿದ್ದಾಪುರ ವರ್ಕ್ ಶಾಪ್ ಎದುರಿನ ಸ್ವರ್ಣಮಾಲ ವೆಡ್ಡಿಂಗ್ ಹಾಲ್ ಬಳಿಯ 54 ವರ್ಷದ ಪುರುಷ, ಹುದಿಕೇರಿ ಆರೋಗ್ಯ ವಸತಿ ಗೃಹದ 31 ವರ್ಷದ ಪುರುಷ, ವೀರಾಜಪೇಟೆ ವಿಜಯ ನಗರದ 2ನೇ ಹಂತದ ಎ ಟು ಜೆಡ್ ಕೇಟರರ್ಸ್ ಸಮೀಪದ 59 ವರ್ಷದ ಪುರುಷ.
ವೀರಾಜಪೇಟೆ ಕುಟ್ಟ ತೈಲ ಗ್ರಾಮದ 64 ವರ್ಷದ ಪುರುಷ, ವೀರಾಜಪೇಟೆ ಮೀನ್ ಪೇಟೆಯ ಪೆÇಲೀಸ್ ವಸತಿಗೃಹದ 57 ವರ್ಷದ ಪುರುಷ, ನಾಪೆÇೀಕ್ಲು ಪೆÇಲೀಸ್ ಸ್ಟೇಷನ್ ಬಳಿಯ 34 ವರ್ಷದ ಪುರುಷ, ಮಡಿಕೇರಿ ಹೊಸ ಬಡಾವಣೆಯ 14ನೇ ಬ್ಲಾಕಿನ 73 ವರ್ಷದ ಪುರುಷ, ವೀರಾಜಪೇಟೆ ಹುದಿಕೇರಿ ಗ್ರಾಮದ ತೆರಾಳುವಿನ 31 ವರ್ಷದ ಮಹಿಳೆ, ಮೂರ್ನಾಡು ಕೊಡಂಬೂರುವಿನ 23 ವರ್ಷದ ಮಹಿಳೆ, ಮಾದಾಪುರ ಕಾರಿಕಾಡುವಿನ 65 ವರ್ಷದ ಮಹಿಳೆ, ಕುಶಾಲನಗರ ಕೊಪ್ಪಲು ನಲ್ಲೂರುವಿನ 25 ವರ್ಷದ ಮಹಿಳೆ, ಸೋಮವಾರಪೇಟೆಯ 28 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.