ಕುಶಾಲನಗರ, ಆ. 19: ಕಾವೇರಿ ನದಿ ಪ್ರವಾಹ ಬಂದು ಕುಶಾಲನಗರದ ನದಿ ತಟದಲ್ಲಿರುವ ಹಲವು ಸ್ಮಶಾನಗಳು ಜಲಾವೃತಗೊಂಡಿದ್ದು ಕೆಲವೆಡೆ ನೀರು ಇನ್ನೂ ತೆರವುಗೊಳ್ಳದೆ ಶವಸಂಸ್ಕಾರಕ್ಕೆ ತೊಡಕುಂಟಾಗಿ ರುವುದು ಕಂಡುಬಂದಿದೆ. ಕುಶಾಲನಗರ-ಮೈಸೂರು ರಸ್ತೆಯ ಕೊಪ್ಪ ಅರಣ್ಯ ಗೇಟ್ ಬಳಿ ಸ್ಮಶಾನವೊಂದರಲ್ಲಿ ನೀರು ತುಂಬಿ ನಿಂತಿದ್ದು ಕಾಣಬಹುದು.