ಚೆಟ್ಟಳ್ಳಿ, ಆ. 19: 181 ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಅಂಗವಾಗಿ ಮಡಿಕೇರಿ ತಾಲೂಕು ಛಾಯಾಗ್ರಾಹಕರು ಇಂದು ಮಡಿಕೇರಿಯ ಶಕ್ತಿ ವೃದ್ಧಾಶ್ರಮಕ್ಕೆ ತೆರಳಿ ಅವರಿಗೆ ಬೇಕಾದ ನಿತ್ಯ ಬಳಕೆಯ ವಸ್ತುಗಳನ್ನು ನೀಡಿ ಅವರೊಂದಿಗೆ ಸ್ವಲ್ಪ ಹೊತ್ತು ಕಳೆದು ಛಾಯಾಗ್ರಾಹಕರ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದರು. ಕಾರ್ಯಕ್ರಮದಲ್ಲಿ ನಮ್ಮ ಸಂಘದ ಅಧ್ಯಕ್ಷ ಚಂದ್ರಶೇಖರ್, ಮಾಜಿ ಅಧ್ಯಕ್ಷ ಲೂಯಿಸ್ ಚೆಟ್ಟಳ್ಳಿ, ಕಾರ್ಯದರ್ಶಿ ಹನಿಫ್, ಮಾಜಿ ಅಧ್ಯಕ್ಷರುಗಳಾದ ಮುನೀರ್, ಸುರೇಶ್, ಮಾವಟ್ಕರ್ ಹಾಗೂ ಸುಬ್ರಮಣ್ಯ ಶಕ್ತಿ ವೃದ್ಧಾಶ್ರಮದ ವ್ಯವಸ್ಥಾಪಕರು ಇದ್ದರು.