ಕುಶಾಲನಗರ, ಆ. 19: ಕುಶಾಲನಗರದ ಮೊಬೈಲ್ ಅಂಗಡಿ ಒಂದರಲ್ಲಿ ಅಂಗಡಿ ಮಾಲೀಕನ ನಿರ್ಲಕ್ಷ್ಯದಿಂದ ದುಬಾರಿ ಬೆಲೆಯ ಮೊಬೈಲ್ ಒಂದು ಅದಲು ಬದಲಾದ ಘಟನೆ ಮಂಗಳವಾರ ನಡೆದಿದೆ. ಪಟ್ಟಣದ ಮೈಸೂರು ರಸ್ತೆ ಬಳಿಯ ರಾಜ್ ಮೊಬೈಲ್ಸ್ ಅಂಗಡಿಯಲ್ಲಿ ಗ್ರಾಹಕನೊಬ್ಬ ಸಾಮಾನ್ಯ ಬೆಲೆಯ ಮೊಬೈಲ್ ಖರೀದಿಸಿ ತೆರಳುವ ಸಂದರ್ಭ ಟೇಬಲ್ ಮೇಲೆ ಇರಿಸಿದ್ದ ದುಬಾರಿ ಮೊಬೈಲ್ ತೆಗೆದುಕೊಂಡು ಹೋಗಿರುವ ಬಗ್ಗೆ ಅಂಗಡಿ ಮಾಲೀಕರು ಮಾಹಿತಿ ನೀಡಿದ್ದಾರೆ. ಎರಡು ಸಾವಿರ ರೂ. ಮೊಬೈಲ್ ಬದಲು 10 ಸಾವಿರ ಬೆಲೆಯ ಮೊಬೈಲ್ ಅನ್ನು ಗ್ರಾಹಕ ತೆಗೆದುಕೊಂಡು ಹೋಗಿದ್ದಾರೆ. ಪ್ರಕರಣದ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.