ಸುಂಟಿಕೊಪ್ಪ, ಆ.19: ಇಲ್ಲಿಗೆ ಸಮೀಪದ ಪಂಪ್ ಹೌಸ್ ಬಡಾವಣೆಯ ಮನೆಯೊಂದಕ್ಕೆ ಕಳ್ಳರು ನುಗ್ಗಿ ಕಳ್ಳತನ ಮಾಡಿರುವ ಪ್ರಕರಣ ನಡೆದಿದೆ. ಪಂಪ್ ಹೌಸ್ ನಿವಾಸಿ ರಾಜನ್ ಎಂಬವರ ಮನೆಯಲ್ಲಿ ಅಬ್ಬಾಸ್ ಎಂಬವರು ಬಾಡಿಗೆಗೆ ಪಡೆದು ವಾಸವಾಗಿದ್ದರು.
ಇವರು ಕುಟುಂಬ ಸಮೇತರಾಗಿ ಚೇರಂಬಾಣೆಯ ನೆಂಟರ ಮನೆಗೆ ಮೂರು ದಿನಗಳ ಹಿಂದೆ ತೆರಳಿದ್ದು ಬುಧವಾರ ಸಂಜೆ ಮನೆಗೆ ಆಗಮಿಸಿದ್ದಾರೆ. ಮನೆಯ ಬೀಗ ತೆಗೆದು ಒಳ ಪ್ರವೇಶ ಮಾಡಿದಾಗ ಮನೆಯಲ್ಲಿದ್ದ ಕಪಾಟನ್ನು ಮುರಿದಿರುವುದು ಗೋಚರಿಸಿದೆ. ಪರಿಶೀಲಿಸಿದಾಗ ಅದರೊಳಗಿದ್ದ ಮಗುವಿನ ಮೂರು ಚಿನ್ನದ ಉಂಗುರ, ಮೊಬೈಲ್ ಸೇರಿದಂತೆ 15 ಸಾವಿರ ಹಣವನ್ನು ಕಳ್ಳತನ ಮಾಡಿರುವುದು ತಿಳಿದು ಬಂದಿದೆ. ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ದೂರು ನೀಡಿದ್ದು ಠಾಣಾಧಿಕಾರಿ ವೆಂಕಟರಮಣ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಕಪಾಟು ಒಡೆಯಲು ಬಳಸಿದ್ದ ಎರಡು ಸುತ್ತಿಗೆÀಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.