ಚೆಟ್ಟಳ್ಳಿ, ಆ. 18: ಭಾರೀ ಮಳೆಗೆ ಭೂಕುಸಿತಕ್ಕೊಳಗಾದ ಜಿಲ್ಲೆಯ ತಲಕಾವೇರಿಗೆ ಕರ್ನಾಟಕ ಮುಸ್ಲಿಂ ಜಮಾಅತ್ ನಿಯೋಗ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕರ್ನಾಟಕ ರಾಜ್ಯ ವಕ್ಫ್‍ಮಂಡಳಿ ಸದಸ್ಯರೂ, ಮುಸ್ಲಿಂ ಜಮಾಅತ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಶಾಫಿ ಸಅದಿ, ಯಾಕೂಬ್ ಶಿವಮೊಗ್ಗ, ಕೊಡಗು ಜಿಲ್ಲಾ ಮುಸ್ಲಿಂ ಜಮಾಅತ್ ನಾಯಕರಾದ ಹಫೀಲ್ ಸಅದಿ, ಇಸ್ಮಾಯಿಲ್ ಸಖಾಫಿ, ಹಮೀದ್ ಕಬಡಗರೆ, ಮುಹಮ್ಮದ್ ಹಾಜಿ ಕುಂಜಿಲ, ವಕೀಲರಾದ ಕುಂಞÂಬ್ದುಲ್ಲ, ಅಬೂಬಕರ್ ಸಖಾಫಿ ಇದ್ದರು.