ಕುಶಾಲನಗರ, ಆ. 19: ಕಾವೇರಿ ಹೊಳೆಯಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಮಾರುಕಟ್ಟೆ ರಸ್ತೆ ಹಿಂದು ರುದ್ರಭೂಮಿ ಬಳಿ ಕಾವೇರಿ ನದಿಯಲ್ಲಿ ಪ್ಲಾಸ್ಟಿಕ್ ಹೊದಿಕೆ ಸುತ್ತಿ ಹಗ್ಗದಿಂದ ಬಿಗಿದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದೆ. ಅಲ್ಲದೆ ಮೃತದೇಹಕ್ಕೆ ಕಲ್ಲು ಕಟ್ಟಿರುವ ಕಾರಣ ಶವ ಮೇಲೆಳದೆ ನೀರಿನಲ್ಲೇ ಬಹುತೇಕ ಕೊಳೆತು ಹೋಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್ಪಿ ಶೈಲೇಂದ್ರ, ವೃತ್ತ ನಿರೀಕ್ಷಕ ಮಹೇಶ್, ಠಾಣಾಧಿಕಾರಿ ಗಣೇಶ್ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.