ಮಡಿಕೇರಿ, ಆ. 17: ಕಳೆದ ಎರಡು ವರ್ಷಗಳಲ್ಲಿ ಮಳೆಯಿಂದ ಸಂಭವಿಸಿದ ಪ್ರಾಕೃತಿಕ ವಿಕೋಪ ದಿಂದ ಸರಳ ಆಚರಣೆಗೆ ಸೀಮಿತ ವಾಗಿದ್ದ ಗೌರಿ ಗಣೇಶ ಉತ್ಸವಕ್ಕೆ ಈ ಬಾರಿ ಮಳೆಯೊಂದಿಗೆ ಕೊರೊನಾ ವೈರಸ್ ಕೂಡ ಕಂಟಕ ವಾಗಿ ಪರಿಣಮಿಸಿದೆ. ವರ್ಷಂಪ್ರತಿ ವೈವಿಧ್ಯಮಯ ಕಾರ್ಯಕ್ರಮ ಗಳೊಂದಿಗೆ ನಗರ ವ್ಯಾಪ್ತಿಯಲ್ಲಿ 30 ಕ್ಕೂ ಅಧಿಕ ಕಡೆ ಆಚರಿಸಲ್ಪಡುವ ಸಾರ್ವಜನಿಕ ಗೌರಿ-ಗಣೇಶೋತ್ಸವದ ಈ ಬಾರಿ ಕೊರೊನಾ ವೈರಸ್ ಹಿನೆÀ್ನಲೆಯಲ್ಲಿ ಮತ್ತಷ್ಟು ಕಳೆಗುಂದಿದೆ. ಕೊರೊನಾ ವೈರಸ್ ಹಿನೆÀ್ನಲೆಯಲ್ಲಿ ಈ ಬಾರಿ ಗಣಪತಿ ಉತ್ಸವ ಆಚರಣೆಗೆ ಹಲವಾರು ನಿರ್ಬಂಧಗಳನ್ನು ವಿಧಿಸಿ ಸರ್ಕಾರ ಆದೇಶ ಹೊರಡಿಸಿದೆ. ದೇವಾಲಯಗಳು ಹಾಗೂ ಮನೆಗಳನ್ನು ಹೊರತುಪಡಿಸಿ ಸಾರ್ವಜನಿಕ ರಸ್ತೆ, ಮೈದಾನ, ಓಣಿಗಳಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡುವಂತಿಲ್ಲ, ಯಾವುದೇ ರೀತಿಯ ಮೆರವಣಿಗೆ ನಡೆಸದೆ ಸಾರ್ವಜನಿಕ ನದಿ, ಕೆರೆ,ಕೂಳ, ಬಾವಿ, ಕಲ್ಯಾಣಿಗಳಲ್ಲಿ ಉತ್ಸವ ಮೂರ್ತಿಗಳನ್ನು ವಿಸರ್ಜನೆ ಮಾಡದೆ; ಮನೆ ಹಾಗೂ ದೇವಾಲಯಗಳ ಆವರಣದಲ್ಲಿಯೇ ವಿಸರ್ಜಿಸಬೇಕು ಎಂಬಿತ್ಯಾದಿ ಸೂಚನೆಗಳನ್ನು ಸರ್ಕಾರ ನೀಡಿದೆ. ಈ ಕಾರಣಗಳಿಂದಾಗಿ ಬಹುತೇಕ ಸಾರ್ವಜನಿಕ ಸ್ಥಳಗಳಲ್ಲಿಯೇ ಗಣಪತಿ ಆರಾಧನೆ ನಡೆಸುತ್ತಿದ್ದ ಸಮಿತಿಗಳು ಇದೀಗ ಕಂಗಾಲಾಗಿವೆ. ದೇವಾಲಯ ಗಳಲ್ಲಿ ಆರಾಧಿಸುತ್ತಿದ್ದ ಸಮಿತಿಗಳು ಮಾತ್ರ ಸಿದ್ಧತೆ ಕೈಗೊಂಡಿವೆ.

ಪೊಲೀಸ್ ಸಭೆ

ಗಣೇಶೋತ್ಸವ ಆಚರಣೆ ಸಂಬಂಧ ನಿನ್ನೆ ದಿನ ಮಡಿಕೇರಿ ನಗರ ಠಾಣೆಯಲ್ಲಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಹಾಗೂ ಠಾಣಾಧಿಕಾರಿ ಅಂತಿಮ ಇವರುಗಳ ಸಮ್ಮುಖದಲ್ಲಿ ಗಣೇಶೋತ್ಸವ ಸಮಿತಿಗಳ ಪ್ರಮುಖರ ಸಭೆ ನಡೆದಿದ್ದು, ಈ ಸಭೆಯಲ್ಲಿಯೂ ಕೊರೊನಾ ಹಿನೆÀ್ನಲೆಯಲ್ಲಿ ಸರ್ಕಾರ ಜಾರಿಗೊಳಿಸಿರುವ ಮಾರ್ಗ ಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳು ಉತ್ಸವ ಸಮಿತಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ ಸಾರ್ವಜನಿಕ ಸ್ಥಳಗಳನ್ನು ಹೊರತುಪಡಿಸಿ ತಮ್ಮ ಸ್ವಂತ ಜಾಗ ಗಳಲ್ಲಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಅವಕಾಶ ನೀಡಬೇಕು; ಮೆರವಣಿಗೆ ರಹಿತವಾಗಿ ಗೌರಿ ಕೆರೆಯಲ್ಲಿ ಉತ್ಸವ ಮೂರ್ತಿಗಳನ್ನು ವಿಸರ್ಜನೆÉ ಮಾಡಲು ಅನುಮತಿ ನೀಡಬೇಕು ಎಂಬುದಾಗಿ ಬಹಳಷ್ಟು ಸೂಚನೆಗಳನ್ನು ಸರ್ಕಾರ ನೀಡಿದೆ. ಈ ಕಾರಣಗಳಿಂದಾಗಿ ಬಹುತೇಕ ಸಾರ್ವಜನಿಕ ಸ್ಥಳಗಳಲ್ಲಿಯೇ ಗಣಪತಿ ಆರಾಧನೆ ನಡೆಸುತ್ತಿದ್ದ ಸಮಿತಿಗಳು ಇದೀಗ ಕಂಗಾಲಾಗಿವೆ. ದೇವಾಲಯ ಗಳಲ್ಲಿ ಆರಾಧಿಸುತ್ತಿದ್ದ ಸಮಿತಿಗಳು ಮಾತ್ರ ಸಿದ್ಧತೆ ಕೈಗೊಂಡಿವೆ.

ಪೊಲೀಸ್ ಸಭೆ

ಗಣೇಶೋತ್ಸವ ಆಚರಣೆ ಸಂಬಂಧ ನಿನ್ನೆ ದಿನ ಮಡಿಕೇರಿ ನಗರ ಠಾಣೆಯಲ್ಲಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಹಾಗೂ ಠಾಣಾಧಿಕಾರಿ ಅಂತಿಮ ಇವರುಗಳ ಸಮ್ಮುಖದಲ್ಲಿ ಗಣೇಶೋತ್ಸವ ಸಮಿತಿಗಳ ಪ್ರಮುಖರ ಸಭೆ ನಡೆದಿದ್ದು, ಈ ಸಭೆಯಲ್ಲಿಯೂ ಕೊರೊನಾ ಹಿನೆÀ್ನಲೆಯಲ್ಲಿ ಸರ್ಕಾರ ಜಾರಿಗೊಳಿಸಿರುವ ಮಾರ್ಗ ಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳು ಉತ್ಸವ ಸಮಿತಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ ಸಾರ್ವಜನಿಕ ಸ್ಥಳಗಳನ್ನು ಹೊರತುಪಡಿಸಿ ತಮ್ಮ ಸ್ವಂತ ಜಾಗ ಗಳಲ್ಲಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಅವಕಾಶ ನೀಡಬೇಕು; ಮೆರವಣಿಗೆ ರಹಿತವಾಗಿ ಗೌರಿ ಕೆರೆಯಲ್ಲಿ ಉತ್ಸವ ಮೂರ್ತಿಗಳನ್ನು ವಿಸರ್ಜನೆÉ ಮಾಡಲು ಅನುಮತಿ ನೀಡಬೇಕು ಎಂಬುದಾಗಿ ಬಹಳಷ್ಟು