ಪೆÇನ್ನಂಪೇಟೆ. ಆ. 17: ಪೆÇನ್ನಂಪೇಟೆ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ಮಳೆ ಜೋರಾಗಿದ್ದು, ಭಾನುವಾರ ರಾತ್ರಿ ಸುರಿದ ಮಳೆಗೆ ಇಲ್ಲಿನ ತ್ಯಾಗರಾಜ ರಸ್ತೆಯಲ್ಲಿರುವ ಸರೋಜಮ್ಮ ಎಂಬವರ ಮನೆಯ ಹಿಂಭಾಗದ ಗೋಡೆ ಕುಸಿದು ಬಿದ್ದಿದ್ದು, ಹೆಂಚುಗಳು ಹೊಡೆದು ಹೋಗಿವೆ. ಸ್ಥಳಕ್ಕೆ ಪೆÇನ್ನಂಪೇಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೂಕಳೇರ ಸುಮಿತ, ಪಿಡಿಒ ಪುಟ್ಟರಾಜು, ಗ್ರಾಮ ಲೆಕ್ಕಿಗ ಮಾಳಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಅಣ್ಣೀರ ಹರೀಶ್ ಹಾಗೂ ಚಂದ್ರು ಭೇಟಿ ನೀಡಿ ಪರಿಶೀಲಿಸಿದರು.