ಸಿದ್ದಾಪುರ, ಆ. 17: ಗೌರಿ-ಗಣೇಶ ಉತ್ಸವ ಆಚರಣೆ ವಿಚಾರ ಸಂಬಂಧಿಸಿ ಉಭಯ ಕಡೆಗಳ ನಡುವೆ ಮಾತಿನ ಚಕಮಕಿ ನಡೆದು ಹೊಡೆದಾಟ ನಡೆದಿರುವ ಘಟನೆ ಬೈರಂಬಾಡ ಗ್ರಾಮದಲ್ಲಿ ನಡೆದಿದೆ.
ಅಲ್ಲಿನ ನಿವಾಸಿಯಾದ ರಾಜ ಹಾಗೂ ಅವರ ಸ್ನೇಹಿತರು ಈ ಬಾರಿ ಗೌರಿ-ಗಣೇಶ ಉತ್ಸವವನ್ನು ನಡೆಸುವುದಾಗಿ ಪಟ್ಟು ಹಿಡಿದಿದ್ದರು ಎನ್ನಲಾಗಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಅಲ್ಲಿನ ನಿವಾಸಿ ಬೋಪಯ್ಯ ಈ ಬಾರಿ ಕೊರೊನಾ ವೈರಸ್ ಇರುವ ಹಿನ್ನೆಲೆಯಲ್ಲಿ ಹಾಗೂ ಅನುಮತಿಯನ್ನು ಪಡೆಯದೆ ಗೌರಿ-ಗಣೇಶ ಆಚರಣೆಯನ್ನು ನಡೆಸುವುದು ಬೇಡವೆಂದು ಆಕ್ಷೇಪಿಸಿ ದ್ದಾರೆ ಎನ್ನಲಾಗಿದೆ. ಇದಕ್ಕೆ ಆಕ್ರೋಶ ಗೊಂಡ ರಾಜ ಹಾಗೂ ಅವರ ಸ್ನೇಹಿತರು ಬೋಪಯ್ಯ ಹಾಗೂ ಅವರ ಸ್ನೇಹಿತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬೋಪಯ್ಯ ಸಿದ್ದಾಪುರ ಪೆÇಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈತನ್ಮಧ್ಯೆ ರಾಜ ಎಂಬವರ ಮೇಲೆ ಬೋಪಯ್ಯ ಹಾಗೂ ಸ್ನೇಹಿತರು ಹಲ್ಲೆ ನಡೆಸಿದ್ದಾರೆ ಎಂದು ರಾಜ ಸಿದ್ದಾಪುರ ಪೆÇಲೀಸ್ ಠಾಣೆಗೆ ದೂರು ನೀಡಿದ್ದು, ಉಭಯ ಕಡೆಗಳ ವಿರುದ್ಧ ಹಲ್ಲೆ ಪ್ರಕರಣ ದಾಖಲಾಗಿದ್ದು ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ತನಿಖೆ ನಡೆಸುತ್ತಿದ್ದಾರೆ.